ಕರ್ನಾಟಕ

ಬಿಡದಿಯ ಮನೆಯಲ್ಲಿ ಮುತ್ತಪ್ಪ ರೈ ಅಂತ್ಯಸಂಸ್ಕಾರ

Pinterest LinkedIn Tumblr


ರಾಮನಗರ(ಮೇ 15): ಮೇ 14ರ ತಡರಾತ್ರಿ ಮೃತಪಟ್ಟಿದ್ದ ಮುತ್ತಪ್ಪ ರೈ ಅವರ ಅಂತ್ಯಕ್ರಿಯೆ ನಿನ್ನೆ (ಶುಕ್ರವಾರ) ಅವರ ಬಿಡದಿ ನಿವಾಸದ ಆವರಣದಲ್ಲಿ ನೆರವೇರಿತು. ಬಂಟ್ ಸಂಪ್ರದಾಯದಂತೆ ಅವರ ಕುಟುಂಬ ಸದಸ್ಯರು ಅಂತಿಮ ವಿಧಿವಿಧಾನ ನಡೆಸಿದರು. ಪುತ್ರ ರಿಕ್ಕಿ ತಮ್ಮ ತಂದೆ ಮೃತದೇಹವಿದ್ದ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು.

ಮಧ್ಯಾಹ್ನ 12.05ಕ್ಕೆ ಬೆಂಗಳೂರಿನ‌ ಮಣಿಪಾಲ್ ಆಸ್ಪತ್ರೆಯಿಂದ ಮೃತದೇಹ ರವಾನೆಯಾಗಿ ಮಧ್ಯಾಹ್ನ 2.15 ರ ವೇಳೆಗೆ ಬಿಡದಿ ತಪುಪಿತು. ನಂತರ 5 ನಿಮಿಷಗಳ ಕಾಲ ಬಿಡದಿ ಬಳಿ ಸಾರ್ವಜನಿಕರಿಗೆ ಅಂತಿಮ ದರ್ಶನ ಮಾಡಲು ಅವಕಾಶ ಮಾಡಿಕೊಡಲಾಗಿತ್ತು. ಕೊರೋನಾದಿಂದಾಗಿ ಸರ್ಕಾರದ ನಿಯಮದ ಪ್ರಕಾರ ಕೇವಲ ಕುಟುಂಸ್ಥರಿಗೆ ಮಾತ್ರ ಅಂತ್ಯಕ್ರಿಯೆ ಪಾಲ್ಗೊಳ್ಳಲು ಅವಕಾಶ ಮಾಡಿಕೊಡಲಾಗಿತ್ತು. ಇದರಿಂದಾಗಿ ಪೊಲೀಸರು ಬಿಗಿ ಭದ್ರತೆಯನ್ನು ಮಾಡಿಕೊಂಡಿದ್ದರು. ಮುತ್ತಪ್ಪ ರೈ ಮನೆಗೆ 2 ಕಿ.ಮಿ ದೂರದಲ್ಲೇ ಬ್ಯಾರಿಕೇಟ್ ಗಳನ್ನ ಹಾಕಿ ವಾಹನಗಳನ್ನು ತಡೆದಿದ್ದರು. ಸಂಸದ ಡಿ.ಕೆ. ಸುರೇಶ್, ಮಾಜಿ ಶಾಸಕ ಹೆಚ್.ಸಿ. ಬಾಲಕೃಷ್ಣ, MLC ರವಿ ಬಿಡದಿಯಲ್ಲಿ ಅಂತಿಮದರ್ಶನ ಪಡೆದರು.

ಮೂರು ದಿನಗಳಿಂದಲೂ ಸಹ ಮುತ್ತಪ್ಪ ರೈ ಸಾವಿನ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಆದರೆ ಇವತ್ತು ಅವರು ಇಹಲೋಕ ತ್ಯಜಿಸಿದ್ದಾರೆ. ಆದ್ರೆ, ಹಲವು ಆಸೆಗಳನ್ನ ಇಟ್ಟುಕೊಂಡು ಬಲವಾಗಿ ಕಟ್ಟಿರುವ ಜಯ ಕರ್ನಾಟಕ ಸಂಘಟನೆ ಮುಂದೆ ಯಾವ ರೀತಿ ಸಾಗಲಿದೆ ಎಂಬುದನ್ನ ಕಾದು ನೋಡಬೇಕಿದೆ.

ಭೂಗತ ಲೋಕದ ದೊರೆಯಾಗಿ ಆಳ್ವಿಕೆ ಮಾಡಿ ನಂತರ ಸಮಾಜಸೇವೆಗಾಗಿ ಜಯ ಕರ್ನಾಟಕ ಸಂಘಟನೆ ಸ್ಥಾಪನೆ ಮಾಡಿದ್ದ ಮುತ್ತಪ್ಪ ರೈ ಅವರು ದೀರ್ಘ ಕಾಲ ಲಿವರ್ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದರು. ಇತ್ತೀಚೆಗೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಹಲವು ವರ್ಷಗಳ ಹಿಂದೆ ಭೂಗತ ಜಗತ್ತಿನಲ್ಲಿ ಹೆಸರು ಮಾಡಿದ್ದ ಮುತ್ತಪ್ಪ ರೈ ಬ್ಯಾಂಕ್ ಉದ್ಯೋಗಿಯಾಗಿಯೂ ಕೆಲಸ ಮಾಡಿದ್ದರು. ಬಳಿಕ ಬಾರ್ ಮಾಲೀಕರಾದ ಅವರು ಹಂತಹಂತವಾಗಿ ಬೆಳೆಯುತ್ತಾ ಹೋದರು. ನಂತರದ ದಿನಗಳಲ್ಲಿ ಜಯ ಕರ್ನಾಟಕ ಸಂಘಟನೆ ಸಂಸ್ಥಾಪಕರಾಗಿ ಹೊರಹೊಮ್ಮಿದ್ದರು.

68 ವರ್ಷದ ಮುತ್ತಪ್ಪ ರೈ ಜನವರಿಯಲ್ಲಿ ಸುದ್ದಿಗೋಷ್ಠಿ ನಡೆಸಿ, ನಾನು ಮಾರಣಾಂತಿಕ ಲಿವರ್ ಕ್ಯಾನ್ಸರ್​ನಿಂದ ಬಳಲುತ್ತಿದ್ದೇನೆ. ಈ ಕಾಯಿಲೆ ನನ್ನ ಶತ್ರುವಿಗೂ ಸಹ ಬರಬಾರದು. ಆದರೂ ನನ್ನಲ್ಲಿ ವಿಲ್ ಪವರ್ ಇದೆ. ಈ ಸಾವನ್ನ ಗೆದ್ದು ಬರುತ್ತೇನೆ ಎಂದು ಆತ್ಮವಿಶ್ವಾಸದಿಂದ ಮಾತನಾಡಿದ್ದರು. ಆದರೆ ವಿಧಿಯ ಮುಂದೆ ಯಾವದೇ ಆಟ ನಡೆಯುವುದಿಲ್ಲ. ನಿನ್ನೆ ಚಿಕಿತ್ಸೆ ಫಲಕಾರಿಯಾಗದೇ ಮುತ್ತಪ್ಪ ರೈ ನಿಧನರಾಗಿದ್ದಾರೆ.

Comments are closed.