ಕರ್ನಾಟಕ

ಅನೈತಿಕ ಸಂಬಂಧ ಪ್ರಶ್ನಿಸಿದ ಹೆಂಡತಿಯ ಹತ್ಯೆ ಮಾಡಿ ಶವದೊಡನೆ 2 ದಿನ ಕಳೆದ ಪತಿ ಆತ್ಮಹತ್ಯೆ!

Pinterest LinkedIn Tumblr


ಬೆಂಗಳೂರು: ಬೇರೊಬ್ಬ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿಯೊಬ್ಬ ಪತ್ನಿಯನ್ನು ಕೊಂದು ಎರಡು ದಿನಗಳ ಬಳಿಕ ಸಂಬಂಧಿಗಳಿಗೆ ಸುದ್ದಿ ತಿಳಿಯುತ್ತಿದ್ದಂತೆ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಪರಪ್ಪನ ಅಗ್ರಹಾರ ವ್ಯಾಪ್ತಿಯಲ್ಲಿ ನಡೆದಿದೆ.

ಬಿಹಾರ ಮೂಲದ ಸಂದ್ಯಾ ಎಂಬಾಕೆ ಕೊಲೆಯಾಗಿರುವ ಮಹಿಳೆ. ಈಕೆಯ ಪತಿ ಮನೀಷ್ ಕುಮಾರ್ ಎಂಬಾತನೇ ಸಂದ್ಯಾಳನ್ನು ಕೊಂದು ಇದೀಗ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಘಟನೆ ವಿವರ
ಮೃತ ಸಂದ್ಯಾ ಹಾಗೂ ಮನೀಷ್ ಕುಮಾರ್ ಖಾಸಗಿ ಕಾರ್ಖಾನೆಯ ಮ್ಯಾನೇಜರ್​ ಆಗಿದ್ದ ಮನೀಷ್ ಕುಮಾರ್ ಸಂದ್ಯಾಳನ್ನು ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದ ಎರಡು ವರ್ಷಗಳ ಹಿಂದೆ ಬಿಹಾರದಿಂದ ಬೆಂಗಳೂರಿಗೆ ಆಗಮಿಸಿದ್ದ ದಂಪತಿಗಳು ಕೂಡ್ಲು ಗೇಟ್ ನಲ್ಲಿ ಬಾಡಿಗೆ ಮನೆಯಲ್ಲಿದ್ದರು. ಈ ನಡುವೆ ಮನೀಷ್ ಗೆ ಬೇರೊಬ್ಬ ಯುವತಿಯೊಡನೆ ಪರಿಚಯ, ಸ್ನೇಹ ಬೆಳೆದಿತ್ತು. ಇಬ್ಬರೂ ಅನೈತಿಕ ಸಾಂಬಂಧವನ್ನಿರಿಸಿಕೊಂಡಿದ್ದರು. ಈ ವಿಚಾರ ಪತ್ನಿ ಸಾಂದ್ಯಾಗೆ ತಿಳಿದು ಮನೆಯಲ್ಲಿ ಜಗಳ ಪ್ರಾರಂಬವಾಗಿದೆ.

ಎರಡು ದಿನಗಳ ಹಿಂದೆ ಸಹ ಇದೇ ಕಾರಣಕ್ಕೆ ಜಗಳ ನಡೆಇದ್ದು ಮನೀಷ್ ಪತ್ನಿಯನ್ನು ಕುತ್ತಿಗೆ ಹಿಸುಕಿ ಕೊಂದಿದ್ದು ಶವವನ್ನು ಮನೆಯಲ್ಲೇ ರಿಸಿಕೊಂಡು ತಾನೂ ಮನೆಯಲ್ಲಿದ್ದ. ಇತ್ತ ಸಂದ್ಯಾ ತವರು ಮನೆಯವರು ಕಳೆದ ಎರಡು ದಿನಗಳಿಂದ ಆಕೆಯ ಕರೆ ಬಾರದ ಹಿನ್ನೆಲೆಯಲ್ಲಿ ಕರೆ ಮಾಡಿದ್ದಾರೆ. ಆದರೆ ಆಕೆಯಿಂದ ಪ್ರತಿಕ್ರಿಯೆ ಬಂದಿಲ್ಲ. ಆಕೆಯ ಪ್ರತಿಕ್ರಿಯೆ ಬಾರದ ಕಾರಣ ಗಾಬರಿಗೊಂಡ ಅವರು ಮನೆಗೆ ಹುಡುಕಿ ಬಂದಿದ್ದಾರೆ. ಆದರೆ ಸಂದ್ಯಾ ಮನೆಯವರಿಗೆ ವಿಚಾರ ತಿಳಿದು ಅನಾಹುತವಾಗಿದೆ ಎಂದರಿತ ಮನೀಷ್ ತಾನೂ ವಿಚಲಿತನಾಗಿ ಮೂರನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸಧ್ಯ ಪರಪ್ಪನ ಅಗ್ರಹಾರ ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Comments are closed.