ಬೆಂಗಳೂರು: ಲಾಕ್ ಡೌನ್ 4.0 ಸಂದರ್ಭದಲ್ಲಿ ಅಂತರ ಜಿಲ್ಲೆಯೊಳಗೆ ಪ್ರಯಾಣಿಸಲು ಪಾಸ್ ಗಳ ಅಗತ್ಯವಿರುವುದಿಲ್ಲ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ತಿಳಿಸಿದ್ದಾರೆ.
ಈ ಬಗ್ಗೆ ಡಿಜಿಪಿ ಕರ್ನಾಟಕ ಟ್ವಿಟ್ಟರ್ ನಲ್ಲಿ ಸ್ಪಷ್ಟನೆ ನೀಡಲಾಗಿದ್ದು ಪ್ರಯಾಣ ಮಾಡುವಾಗ ಅಗತ್ಯ ವಸ್ತುಗಳನ್ನು, ದಾಖಲೆಗಳನ್ನು ಕೊಂಡೊಯ್ಯಿರಿ ಎಂದು ಸೂಚನೆ ನೀಡಿದ್ದಾರೆ.
ಮಾರ್ಚ್ 25ರಿಂದ ಹೊರಡಿಸಲಾಗಿದ್ದ ಲಾಕ್ ಡೌನ್ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶವಿರಲಿಲ್ಲ. ನಂತರ ಸ್ವಲ್ಪ ವಿನಾಯ್ತಿ ನೀಡಿ ಪಾಸ್ ಹೊಂದಿರುವವರಿಗೆ ನಿಯಮ ಹೇರಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು.
ಆದರೆ ಇದೀಗ ರಾಜ್ಯಸರ್ಕಾರ ಬಹುತೇಕ ಚಟುವಟಿಕೆಗಳಿಗೆ ನಿರ್ಬಂಧ ಸಡಿಲಿಸಿದ್ದು ಜಿಲ್ಲೆಗಳೊಳಗೆ ವಾಹನ ಸಂಚಾರಕ್ಕೆ ಇನ್ನು ಮುಂದೆ ಪಾಸ್ ಅಗತ್ಯವಿಲ್ಲ ಎಂದು ಹೇಳಿದೆ. ಸಾಯಂಕಾಲ 7 ಗಂಟೆಯಿಂದ ಬೆಳಗ್ಗೆ 7 ಗಂಟೆಯವರೆಗೆ ಲಾಕ್ ಡೌನ್ ಮುಂದುವರಿಯಲಿದೆ ಎಂದು ಸ್ಪಷ್ಟನೆ ನೀಡಿದೆ.
Comments are closed.