ಕರ್ನಾಟಕ

ರಾಜ್ಯದಲ್ಲಿ ದೇವಸ್ಥಾನಗಳು ಜೂನ್ 1ರಿಂದ ತೆರೆಯಲು ಅವಕಾಶ

Pinterest LinkedIn Tumblr


ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದರೂ ಜೂನ್ 1ರಿಂದ ರಾಜ್ಯದ ದೇವಸ್ತಾನಗಳನ್ನು ತೆರೆಯಲು ಸರ್ಕಾರ ಅವಕಾಶ ನೀಡಿದೆ.

ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ದೇವಸ್ತಾನಗಳನ್ನು ತೆರೆಯುವುದರ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಹೇಳಿದ್ದಾರೆ.

ಇನ್ನು ಸದ್ಯಕ್ಕೆ ಜಾತ್ರೆ, ಸಮಾರಂಭಗಳಿಗೆ ಅವಕಾಶ ಇಲ್ಲ ನೀಡಲಾಗಿಲ್ಲ. ದೇವಸ್ತಾನಗಳಲ್ಲಿ ಭಕ್ತರು ಕಡ್ಡಾಯವಾಗಿ ಸಾಮಾಜಿಕ ಅಂತರ ಪಾಲನೆ ಮಾಡಬೇಕಿದೆ ಎಂದರು.

ನಾಳೆಯಿಂದ ರಾಜ್ಯ 52 ದೇವಸ್ತಾನಗಳ ಆನ್ ಲೈನ್ ಸೇವೆಗೆ ಅವಕಾಶ ನೀಡಲಾಗಿದೆ ಎಂದ ಅವರು ಮಸೀದಿ, ಚರ್ಚ್ ತೆರೆಯುವ ಬಗ್ಗೆ ಇನ್ನು ನಿರ್ಧಾರವಾಗಿಲ್ಲ ಎಂದರು.

Comments are closed.