ಬೀದರ್ : ಬೆಂಗಳೂರಿನಿಂದ ಬೀದರ್‌ಗೆ ಸಾರಿಗೆ ಬಸ್ಸಿನಲ್ಲಿ ಆಗಮಿಸಿರುವ ಔರಾದ ತಾಲೂಕಿನ ಸಾವಳಿ ಗ್ರಾಮದ ಯುವಕನೊಬ್ಬನಲ್ಲಿ ಕೋವಿಡ್-19 ಸೋಂಕು ಪತ್ತೆಯಾಗಿರುವುದು ಆತಂಕ ಸೃಷ್ಟಿಸಿದೆ.
ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ್ದ ಈ ಯುವಕನ ಗಂಟಲು ಮಾದರಿಯನ್ನು ಪರೀಕ್ಷೆಗೆ ಪಡೆಯಲಾಗಿತ್ತು. ನಾಲ್ಕು ಕ್ವಾರಂಟೈನ್‌ನಲ್ಲಿ ಇದ್ದ ಬಳಿಕ ಈಗ ಬಸ್ಸಿನಲ್ಲಿ ಬೀದರಗೆ ಬಂದಿದ್ದಾನೆ. ನಂತರ ಸ್ವ್ವ ಇಚ್ಛೆಯಿಂದ ಮತ್ತೊಮ್ಮೆ ಗಂಟಲು ಮಾದರಿಯನ್ನು ಪರೀಕ್ಷೆಗೆ ನೀಡಿದ್ದಾನೆ. ಇದೀಗ ಬೆಂಗಳೂರಿನಲ್ಲಿ ನೀಡಿದ್ದ ಹಾಗೂ ಬೀದರನಲ್ಲಿ ನೀಡಿದ್ದ ಎರಡೂ ಸ್ಯಾಂಪಲ್ ಪಾಸಿಟಿವ್ ಬಂದಿದೆ ಎಂದು ಖಚಿತ ಮೂಲಗಳಿಂದ ತಿಳಿದು ಬಂದಿದೆ.
ಸದ್ಯ ಈ ಯುವಕ ಬೀದರನ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆದರೆ, ಬೆಂಗಳೂರಿನಿಂದ ಬಸ್ಸಿನಲ್ಲಿ ಬಂದಿರುವ ಹಿನ್ನೆಲೆಯಲ್ಲಿ ಇತರೆ ಸಹ ಪ್ರಯಾಣಿಕರಿಗೆ ಸೋಂಕು ತಗುಲಿರುವ ಸಾಧ್ಯತೆ ಇದ್ದು, ಜಿಲ್ಲಾಡಳಿತಕ್ಕೆ ಆತಂಕ ಶುರುವಾಗಿದೆ.
Comments are closed.