ಕರ್ನಾಟಕ

ಕಲಬುರಗಿ: 20 ಜನರಲ್ಲಿ ಕೊರೋನಾ ವೈರಸ್ ಪತ್ತೆ: ಸೋಂಕಿತರ ಸಂಖ್ಯೆ 816ಕ್ಕ ಏರಿಕೆ

Pinterest LinkedIn Tumblr


ಕಲಬುರಗಿ: ಜಿಲ್ಲೆಯಲ್ಲಿ ಕೊರೊನಾ ಗ್ರಾಪ್‌ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಶುಕ್ರವಾರ 20 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಹೀಗಾಗಿ ಜಿಲ್ಲೆಯಾದ್ಯಂತ ಸೋಂಕಿತರ ಸಂಖ್ಯೆ 816ಕ್ಕೆ ತಲುಪಿದೆ.

ಈ ಮಧ್ಯೆ ತೀವ್ರ ಉಸಿರಾಟದ (Severe Acute Respiratory Infection) ಸಮಸ್ಯೆಯಿಂದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

ಕಲಬುರಗಿಯ ಎಂ‌ಎಸ್.ಕೆ ಮಿಲ್ ಪ್ರದೇಶದ 53 ವರ್ಷದ ವ್ಯಕ್ತಿ ಪಿ-6323 ಹಾಗೂ ಚಿಂಚೋಳಿ ತಾಲೂಕಿನ ಕೆರೊಳ್ಳಿ ಗ್ರಾಮದ 48 ವರ್ಷದ ವ್ಯಕ್ತಿ ಪಿ-6325 ಮೃತಪಟ್ಟವರು.

ಶುಕ್ರವಾರ ಸೋಂಕಿತರ ಪೈಕಿ 16 ಮಂದಿ ಮುಂಬೈ ಮಹಾನಗರದಿಂದ ಇತ್ತೀಚೆಗೆ ತಮ್ಮ ತಮ್ಮ ಹಳ್ಳಿ ಮತ್ತು ತಾಂಡಾಗಳಿಗೆ ಹಿಂದಿರುಗಿದವರಾಗಿದ್ದಾರೆ. ಇಬ್ಬರ ಸೋಂಕಿನ ಮೂಲ ಪತ್ತೆ ಹಚ್ಚಲಾಗುತ್ತಿದೆ‌.

Comments are closed.