ಕರ್ನಾಟಕ

ರಾಜ್ಯಸಭೆಗೆ ದೇವೇಗೌಡ, ಖರ್ಗೆ ಅವಿರೋಧ ಆಯ್ಕೆ

Pinterest LinkedIn Tumblr


ಬೆಂಗಳೂರು: ಮಾಜಿ ಪ್ರಧಾನಿ ದೇವೇಗೌಡ, ಕಾಂಗ್ರೆಸ್‌ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ರಾಜ್ಯದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ದೇವೇಗೌಡ, ಖರ್ಗೆ ಜತೆ ಬಿಜೆಪಿಯ ಈರಣ್ಣ ಕಡಾಡಿ, ಅಶೋಕ್‌ ಗಸ್ತಿ ಕೂಡ ರಾಜ್ಯಸಭೆಗೆ ಪ್ರವೇಶ ಪಡೆದಿದ್ದಾರೆ. ದೇವೇಗೌಡ ಎರಡನೇ ಬಾರಿಗೆ ರಾಜ್ಯಸಭೆಗೆ ಪ್ರವೇಶಿಸಿದರೆ, ಉಳಿದ ಮೂವರು ಇದೇ ಮೊದಲ ಬಾರಿಗೆ ರಾಜ್ಯಸಭೆಗೆ ಎಂಟ್ರಿ ಕೊಟ್ಟಿದ್ದಾರೆ.

ಹರಿಪ್ರಸಾದ್, ರಾಜೀವ್ ಗೌಡ, ಪ್ರಭಾಕರ ಕೋರೆ ಮತ್ತು ಕುಪೇಂದ್ರ ರೆಡ್ಡಿ ನಿವೃತ್ತಿಯಿಂದ ತೆರವಾಗಲಿರುವ ಸ್ಥಾನಗಳನ್ನು ಈ ನಾಲ್ವರು ತುಂಬಲಿದ್ದಾರೆ.

ಐದನೇ ಸ್ಪರ್ಧಿ ಕಣದಲ್ಲಿ ಉಳಿದಿದ್ದರೇ ಇದೇ 19ರಂದು ಚುನಾವಣೆ ನಡೆಯಬೇಕಿತ್ತು.

Comments are closed.