ಕರ್ನಾಟಕ

ಕೇಂದ್ರ ಅಪರಾಧ ತನಿಖಾ ವಿಭಾಗದ ವಶದಲ್ಲಿದ್ದ ಆರೋಪಿಗೆ ಕೊರೊನಾ ಸೋಂಕು; 3 ದಿನ ಕಚೇರಿ ಸೀಲ್ ಡೌನ್

Pinterest LinkedIn Tumblr


ಬೆಂಗಳೂರು: ಕೇಂದ್ರ ಅಪರಾಧ ತನಿಖಾ ವಿಭಾಗದ ವಶದಲ್ಲಿದ್ದ ಆರೋಪಿಯೋರ್ವನಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ನಗರದ ಸಿಸಿಬಿ ಕಚೇರಿಯನ್ನು 3 ದಿನಗಳ ಕಾಲ ಸೀಲ್​ಡೌನ್​ ಮಾಡಲಾಗಿದೆ.

ಪೊಲೀಸ್ ಇತಿಹಾಸದಲ್ಲೇ ಇದೇ ಪ್ರಥಮ ಬಾರಿಗೆ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಯನ್ನ 3 ದಿನಗಳ ಕಾಲ ಸೀಲ್​ಡೌನ್ ಆಗಿದೆ.

ಬಿಬಿಎಂಪಿ ಸಿಬ್ಬಂದಿಗಳು ಸಿಸಿಬಿ ಕಚೇರಿಯನ್ನು ಎರಡು ಬಾರಿ ಸ್ಯಾನಿಟೈಸ್ ಮಾಡಿದ್ದಾರೆ. ಇದೇ ವೇಳೆ ಬ್ಬರು ಇನ್ಸ್​ಪೆಕ್ಟರ್ ಸೇರಿ 20 ಮಂದಿ ಕ್ವಾರಂಟೀನ್​ನಲ್ಲಿರಿಸಲಾಗಿದೆ. ಓಲಾ ಸಂಸ್ಥೆಗೆ ವಂಚನೆ ಂಆಡಿದ್ದ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿಗೆ ಕೊರೋನಾ ಪಾಸಿಟಿವ್ ಬಂದಿದ್ದು ಇದೇ ಕಾರಣದಿಂದ ಸಿಸಿಬಿ ಕಚೇರಿ ಸೀಲ್ ಡೌನ್ ಆಗಿದೆ.

Comments are closed.