ಕರ್ನಾಟಕ

ರಾಜಧಾನಿ ಬೆಂಗಳೂರಿನಲ್ಲಿ ಮತ್ತಿಬ್ಬರು ಕಾನ್ಸ್​ಟೇಬಲ್​​ಗಳಿಗೆ ಕೊರೋನಾ

Pinterest LinkedIn Tumblr


ಬೆಂಗಳೂರು(ಜೂ.22): ರಾಜಧಾನಿ ಬೆಂಗಳೂರಿನಲ್ಲಿ ಮತ್ತಿಬ್ಬರು ಪೊಲೀಸ್​ ಕಾನ್ಸ್​ಟೇಬಲ್​​ಗಳಿಗೆ ಕೊರೋನಾ ಸೋಂಕು ಪತ್ತೆಯಾಗಿದೆ. ಇಂದು ಬೆಳಿಗ್ಗೆ ಬಂದ ಕೋವಿಡ್​​-19 ವರದಿಯಲ್ಲಿ ಕುಮಾರಸ್ವಾಮಿ ಲೇಔಟ್ ಹೆಡ್​ ಕಾನ್ಸ್​ಟೇಬಲ್ ಹಾಗೂ ಸಿಸಿಬಿಯಲ್ಲಿ ಕೆಲಸ ಮಾಡುತ್ತಿದ್ದ ಮತ್ತೋರ್ವ ಪೊಲೀಸ್​ಗೆ ಕೊರೋನಾ ಕಾಣಿಸಿಕೊಂಡಿದೆ. ಇದರೊಂದಿಗೆ ನಗರದಲ್ಲಿನ ಸೋಂಕಿತ ಪೊಲೀಸರ ಸಂಖ್ಯೆ 66ಕ್ಕೇರಿದೆ.

ಇನ್ನು, ಕುಮಾರಸ್ವಾಮಿ ಲೇಔಟ್​ನ ಹೆಡ್​​ ಕಾನ್ಸ್​ಟೇಬಲ್​​ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಿದ್ದರಿಂದ ಹತ್ತು ದಿನಗಳ ಕಾಲ ರಜೆಯನ್ನು ನೀಡಲಾಗಿತ್ತು. ಜೊತೆಗೆ ಮೂರು ದಿನಗಳ ಹಿಂದೆ ಕೊರೋನಾ ಚೆಕಪ್ ಸಹ ಮಾಡಲಾಗಿತ್ತು. ಆದರೆ, ಇಂದು ಇವರಿಗೆ ಕೊರೋನಾ ಪಾಸಿಟಿವ್​​​​ ಇರುವುದು ಖಚಿತವಾಗಿದೆ. ಹೀಗಾಗಿ ಈ ಸೋಂಕಿತ ಪೊಲೀಸನನ್ನು ವಿಕ್ಟೋರಿಯಾದ ಐಸೋಲೇಷನ್ ವಾರ್ಡ್​ಗೆ ಶಿಫ್ಟ್​ ಮಾಡಲಾಗಿದೆ.

ಹಾಗೆಯೇ ಸಿಸಿಬಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಮೂವರು ಪೊಲೀಸರಿಗೆ ಈ ಹಿಂದೆಯೇ ಪಾಸಿಟಿವ್ ಕಾಣಿಸಿಕೊಂಡಿತ್ತು. ಅವರ ಸಂಪರ್ಕದಲ್ಲಿದ್ದ ಮತ್ತೊಬ್ಬ ಪೊಲೀಸ್ ಕಾನ್ಸ್​ಟೇಬಲ್​ಗೆ ಈಗ ಕೊರೋನಾ ಪತ್ತೆಯಾಗಿದೆ. ಓಲಾ ವಂಚನೆ ಪ್ರಕರಣ ಸಂಬಂಧ ಕೊರೋನಾ ಕಾಣಿಸಿಕೊಂಡ ಆರೋಪಿಯನ್ನು ಬಂಧಿಸಿದ್ದರಿಂದ 14 ಜನ ಪೊಲೀಸರನ್ನು ಹೋಮ್​​ ಕ್ವಾರಂಟೈನ್​​ ಮಾಡಲಾಗಿತ್ತು. ಈ ಪೈಕಿ ಒಬ್ಬರು ಈ ಕಾನ್ಸ್​ಟೇಬಲ್​ ಎಂಬ ಶಂಕೆ ವ್ಯಕ್ತವಾಗಿದೆ.

ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕೊರೋನಾ‌ ಸೊಂಕಿತರ ಸಂಖ್ಯೆ ಹೆಚ್ಚಾಗುತ್ತಲೇ. ಈ ನಡುವೆ ಪೊಲೀಸರಿಗೆ ಸೋಂಕು ಬೆಂಬಿಡದೆ ಕಾಡುತ್ತಿದ್ದು, ಮಹಾಮಾರಿ ಕೊರೋನಾದಿಂದ ಮೂವರು ಪೊಲೀಸ್ ಸಿಬ್ಬಂದಿ ಮೃತಪಟ್ಟಿದ್ದಾರೆ. ಇದರಿಂದ ಎಚ್ಚೆತ್ತ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ನಗರದ ಎಲ್ಲಾ ಠಾಣೆಗಳಿಗೆ ಸೂಚನೆ ರವಾನಿಸಿದ್ದಾರೆ.

ಯಾವುದೇ ಕೇಸ್​ನಲ್ಲೂ ಆರೋಪಿಗಳನ್ನು ಮುಟ್ಟಬಾರದು. ವಯಸ್ಸಾದ ಸಿಬ್ಬಂದಿ ಬದಲಿಗೆ ಯಂಗ್​ ಇರುವ ಸಿಬ್ಬಂದಿಯನ್ನು ಹೆಚ್ಚುವರಿವಾಗಿ ನೇಮಿಸಬೇಕು. ಅಲ್ಲದೇ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕೆಲಸ ಮಾಡಬೇಕು. ಹೊಯ್ಸಳಾ ಪೊಲೀಸರು ಸುಖಾಸುಮ್ಮನೇ ತಿರುಗಾಡಬಾರದು. ಸ್ಟೇಷನ್​​ನಲ್ಲಿ ಎಲ್ಲದಕ್ಕೂ ಬಿಸಿ ನೀರು, ಸ್ಯಾನಿಟೈಸರ್​​​ ಕಡ್ಡಾಯಬಾಗಿರಬೇಕು ಎಂದು ಖಡಕ್​​ ಆಗಿ ಆರ್ಡರ್​​ ಮಾಡಲಾಗಿದೆ.

Comments are closed.