ಕರ್ನಾಟಕ

ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಗೂ ಹರಡಿದ ಕರೋನಾ ಸೋಂಕು, ಹೊರರೋಗಿ ವಿಭಾಗ ಬಂದ್

Pinterest LinkedIn Tumblr


ಬೆಂಗಳೂರು: ಕೊರೋನಾ ಸೋಂಕು ಜನತೆಯನ್ನಷ್ಟೇ ಅಲ್ಲ ವೈದ್ಯರನ್ನು ಸಹ ಬೆಚ್ಚಿಬೀಳಿಸುತ್ತಿದ್ದು, ನಗರದ ಜಯದೇವ ಆಸ್ಪತ್ರೆ ವೈದ್ಯರಿಗೂ ವಕ್ಕರಿಸಿದೆ.

ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ 32 ವರ್ಷದ ವೈದ್ಯ ಸೇರಿದಂತೆ ನಾಲ್ವರು ಸೋಂಕು ತಗುಲಿರುವುದು ಬಹಳ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಇಂದಿನಿಂದ ನಾಲ್ಕು ದಿನಗಳ ಕಾಲ ಜಯದೇವ ಹೊರರೋಗಿ ವಿಭಾಗವನ್ನು ಮುಚ್ಚಲಾಗಿದೆ.

ಸೋಂಕು ತಗುಲಿದ ನಂತರ ಇದೆ ಜೂನ್ 24 ರಿಂದ 27 ರವರಗೆ ಹೊರ ರೋಗಿಗಳ ವಿಭಾಗವನ್ನು ಮುಚ್ಚಲಾಗಿದೆ. ಪರಿಣಾಮ ಹೃದಯ ರೋಗಿಗಳಿಗೆ ಬಹಳ ತೊಂದೆಯಾಗಿದೆ. ಹೇಳಿ, ಕೇಳಿ ಹೃದಯ ರೋಗಕ್ಕೆ ಸಂಬಧಪಟ್ಟಂತೆ ಬಡವರಿಗೆ ಕೈಗೆಟುವ ದರದ ಉತ್ತಮ ಚಿಕಿತ್ಸೆ ಸಿಗುವ ಆಸ್ಪತ್ರೆ ಎಂಬ ಹೆಗ್ಗಳಿಕೆ ಪಡೆದಿದೆ.

ಜಯದೇವ ಆಸ್ಪತ್ರೆಯ ಒಬ್ಬರು ವೈದ್ಯರು, ಡೇಟಾ ಎಂಟ್ರಿ ಆಪರೇಟರ್‌ ಮತ್ತು ಲ್ಯಾಬ್‌ ತಂತ್ರಜ್ಞರೊಬ್ಬರಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ. ಹಾಗೆಯೇ, ರಾಜಾಜಿನಗರ ಇಎಸ್‌ಐ ಆಸ್ಪತ್ರೆಯ ವೈದ್ಯರೊಬ್ಬರಿಗೆ ಸೋಂಕು ಕಾಣಿಸಿಕೊಂಡಿದೆ.

ಕಳೆದ ನಾಲ್ಕೈದು ದಿನಗಳಿಂದ ನಗರದಲ್ಲಿ ನಿತ್ಯವೂ ಸೋಂಕಿತರ ಸಂಖ್ಯೆ ಶತಕ ದಾಟುತ್ತಿದ್ದು, ಈವರೆಗೆ 1505 ಪ್ರಕರಣಗಳು ವರದಿಯಾಗಿವೆ. ಈ ಪೈಕಿ 435 ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಉಳಿದ 996 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು 73 ಮಂದಿ ಮೃತಪಟ್ಟಿದ್ದಾರೆ.

Comments are closed.