ಬೆಂಗಳೂರು(ಜೂನ್ 28): ನಗರದಲ್ಲಿ ದಿನೇ ದಿನೇ ಪೊಲೀಸರಲ್ಲಿ ಆತಂಕ ಹೆಚ್ಚಾಗುತ್ತಲೇ ಇದೆ. ಇದುವರೆಗೂ ನಗರದ 31 ಸ್ಟೇಷನ್ಗಳು ಸೀಲ್ಡೌನ್ ಆಗಿದೆ. ಇದರ ಜೊತೆಗೆ ಸುಮಾರು 140 ಕ್ಕೂ ಅಧಿಕ ಪೊಲೀಸರಿಗೆ ಪಾಸಿಟಿವ್ ಅಗಿದ್ದು ಅವರ ಪ್ರೈಮರಿ ಕಾಂಟ್ಯಾಕ್ಟ್ನಲ್ಲಿ ಸುಮಾರು 890 ಮಂದಿ ಪೊಲೀಸರು ಕ್ವಾರೆಂಟೈನ್ ಆಗಿದ್ದಾರೆ. ಇಷ್ಟೇ ಅಲ್ಲ, ನಗರ ಪೊಲೀಸ್ ಆಯುಕ್ತರ ಕಚೇರಿ ಹಾಗೂ ಟ್ರಾಫಿಕ್ ಪೊಲೀಸ್ ಕಮೀಚನರ್ ಕಚೇರಿ ಸಹ ಸೀಲ್ ಡೌನ್ ಮಾಡಲಾಗಿದೆ.
ಪೊಲೀಸರಿಗೆ ಕೊರೋನಾ ಪಾಸಿಟವ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲೇ ಗೃಹ ಸಚಿವರು ಜೂನ್ 30 ರ ಒಳಗೆ ನಗರದಲ್ಲಿರೋ ಎಲ್ಲಾ ಪೊಲೀಸರು ಕೋವಿಡ್ ಚೆಕಪ್ ಮಾಡಿಸಿಕೊಳ್ಳಿ ಅಂತ ಹೇಳಿದ್ದು. ಈಗ ಪೊಲೀಸರು ಒಬ್ಬೊಬ್ಬರೇ ಚೆಕಪ್ ಮಾಡಿಸಲು ಮಂದಾಗ್ತಿದ್ದಾರೆ. ಇದೇ ವೇಳೆ ಸಾಕಷ್ಟು ಸರ್ಕಾರಿ ಆಸ್ಪತ್ರೆಗಳೇ ಪೊಲೀಸರಿಗೆ ತಪಾಸಣೆ ಮಾಡಲು ಹಿಂದೇಟು ಹಾಕುತ್ತಿವೆಯಂತೆ. ಇದರಿಂದ ಆತಂಕದಲ್ಲಿರೋ ಪೊಲೀಸರು ತಾವೇ ಸ್ವಂತ ಹಣದಲ್ಲಿ ತಪಾಸಣೆ ಮಾಡಿಸಿಕೊಳ್ಳುತ್ತಿದ್ದಾರೆ. ಪೊಲೀಸರು ನೀಡಿದ ಮಾಹಿತಿ ಪ್ರಕಾರ ಒಬ್ಬರಿಗೆ ತಪಾಸಣೆ ಮಾಡಿಸಿಕೊಳ್ಳಲು 5 ಸಾವಿರ ಆಗುತ್ತಂತೆ.
ಕ್ವಾರೆಂಟೈನ್ ಆಗಿರುವ 890 ಪೊಲೀಸರ ವರದಿ ಸಹ ದಿನೇ ದಿನೇ ಬರುತ್ತಾ ಇದ್ದು, ಅದ್ರಲ್ಲಿ ಇರುವವರಿಗೂ ಕೆಲವರಿಗೆ ಕೊರೋನಾ ಸೋಂಕು ಬರುತ್ತಿದೆ. ಇದರಿಂದ ಕೆಲಸ ಮಾಡೋಕೆ ಪೊಲೀಸರು ಭಯ ಪಡೋ ಹಂತಕ್ಕೆ ಬಂದು ನಿಂತಿದೆ.
ನಗರದಲ್ಲಿ 106 ಲಾ ಅಂಡ್ ಆರ್ಡರ್ ಹಾಗೂ 42 ಟ್ರಾಫಿಕ್ ಸ್ಟೇಷನ್ಗಳಿದ್ದು ಈಗಾಗಲೇ ಅದರಲ್ಲಿ 31 ಸ್ಟೇಷನ್ಗಳು ಸೀಲ್ ಡೌನ್ ಆಗಿದ್ದು, ಪ್ರತಿ ದಿನವೂ 3-4 ಸ್ಟೇಷನ್ಗಳು ಸೀಲ್ ಡೌನ್ ಆಗುತ್ತಿವೆ. ಇನ್ನು ಈ ಎರಡು ಮೂರು ದಿನಗಳಲ್ಲಿ ಸಾಕಷ್ಟು ಪೊಲೀಸರ ಪರೀಕ್ಷಾ ವರದಿ ಬರಲಿದ್ದು ಸಹಜವಾಗಿ ಆತಂಕ ಶುರುವಾಗಿದೆ.
Comments are closed.