ಬೆಂಗಳೂರು (ಜು.3): ಕೊರೋನಾ ವೈರಸ್ ಹೆಚ್ಚುತ್ತಿರುವ ಮಧ್ಯೆಯೂ ಅಮೆರಿಕ, ಕೆನಡಾ ಹಾಗೂ ಸೌದಿ ರಾಷ್ಟ್ರಗಳಿಗೆ ವಿಮಾನಯಾನ ಆರಂಭಿಸುವ ಬಗ್ಗೆ ಕೇಂದ್ರ ಸರ್ಕಾರ ಮಾತುಕತೆ ಆರಂಭಿಸಿದೆ. ಒಂದೊಮ್ಮೆ ಈ ಮಾತುಕತೆ ಯಶಸ್ವಿಯಾದರೆ ಈ ರಾಷ್ಟ್ರಗಳಿಗೆ ಜುಲೈನಲ್ಲೇ ವಾಣಿಜ್ಯ ವಿಮಾನ ಸೇವೆ ಆರಂಭಗೊಳ್ಳಲಿದೆ.
ಈ ಬಗ್ಗೆ ವಿಮಾನ ನಿಲ್ದಾಣ ಪ್ರಾಧಿಕಾರದ ಮುಖ್ಯಸ್ಥ ಅರವಿಂದ್ ಸಿಂಗ್ ಸಂಪೂರ್ಣ ಮಾಹಿತಿ ನೀಡಿದ್ದಾರೆ. “ವಿಮಾನ ಸೇವೆ ಪುನರಾರಂಭಿಸುವ ಕುರಿತು ಅಮೆರಿಕ, ಕೆನಡಾ ಹಾಗೂ ಸೌದಿ ರಾಷ್ಟ್ರಗಳ ಜೊತೆ ಕೇಂದ್ರ ಸರ್ಕಾರ ಮಾತುಕತೆ ನಡೆಸುತ್ತಿದೆ. ಒಂದೊಮ್ಮೆ ಮಾತುಕತೆ ಯಶಸ್ವಿಯಾದರೆ ಜುಲೈನಲ್ಲೇ ವಿಮಾನಯಾನ ಪ್ರಾರಂಭಗೊಳ್ಳಲಿದೆ. ಆದಷ್ಟು ಬೇಗ ಅಂತಾರಾಷ್ಟ್ರೀಯ ವಿಮಾನ ಸೇವೆ ನೀಡುತ್ತೇವೆ. ಇದಕ್ಕೆ ನಾವು ಸಿದ್ಧಗೊಳ್ಳಬೇಕಿದೆ,” ಎಂದಿದ್ದಾರೆ.
ಭಾರತದಲ್ಲಿ ಕೊರೋನಾ ವೈರಸ್ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಯುರೋಪ್ ರಾಷ್ಟ್ರಗಳು ಭಾರತ ವಿಮಾನಗಳಿಗೆ ನಿಷೇಧ ಹೇರಿವೆ. ಈ ಬಗ್ಗೆಯೂ ಮಾತನಾಡಿರುವ ಅರವಿಂದ್, “ಅಮೆರಿಕ, ಕೆನಡಾ ಸೇರಿ ಇತರ ರಾಷ್ಟ್ರಗಳ ಜೊತೆ ಕೇಂದ್ರ ಸರ್ಕಾರ ಮಾತುಕತೆ ನಡೆಸುತ್ತಿದೆ. ಇನ್ನು, ಯುರೋಪ್ ರಾಷ್ಟ್ರಗಳಿಗೆ ವಿಮಾನ ಸೇವೆ ನೀಡಲು ಮಾರ್ಗಗಳನ್ನು ಅನ್ವೇಷಣೆ ಮಾಡುತ್ತಿದ್ದೇವೆ,” ಎಂದು ತಿಳಿಸಿದ್ದಾರೆ.
ಬೇರೆ ಬೇರೆ ರಾಷ್ಟ್ರಗಳಲ್ಲಿ ಸಿಲುಕಿರುವ ಸಾಕಷ್ಟು ಭಾರತೀಯರು ಕಮರ್ಷಿಯಲ್ ವಿಮಾನಾಗಳ ಹಾರಾಟ ಆರಂಭಿಸುವಂತೆ ಒತ್ತಾಯಿಸಿದ್ದಾರಂತೆ. ಈ ಹಿನ್ನೆಲೆಯಲ್ಲಿ ಆದಷ್ಟು ಬೇಗ ವಿಮಾನ ಸೇವೆ ಆರಂಭಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
Comments are closed.