ಬೆಂಗಳೂರು: ಮಾನವ ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಸವರಾಜ್ ಕಳಸದ್ ಬಂಧಿತ ಆರೋಪಿ. ಆರೋಪಿ ಬಸವರಾಜ್ ಕಳಸದ್ ಮೂಲತಃ ಕೊಪ್ಪಳ ಜಿಲ್ಲೆಯವನು ಎಂದು ತಿಳಿದು ಬಂದಿದೆ. ಆರೊಪಿ ಬಸವರಾಜ್ ಕಳಸದ್ ಮೊದಲಿಗೆ ಯುವತಿಯರಿಗೆ ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸುತ್ತಿದ್ದನು. ನಂತರ ಆರೋಪಿ ಯುವತಿಯರನ್ನು ವಿದೇಶಕ್ಕೆ ಕರೆದುಕೊಂಡು ಹೋಗಿ ಅಕ್ರಮವಾಗಿ ಡ್ಯಾನ್ಸ್ ಬಾರ್‌ಗಳಿಗೆ ಬಿಡುತ್ತಿದ್ದನು.
ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತಮಿಳುನಾಡಿನಿಂದ ಯುವತಿಯರನ್ನ ಕರೆದುಕೊಂಡು ಹೋಗುತ್ತಿದ್ದನು ಎಂದು ತಿಳಿದು ಬಂದಿದೆ. ಇದೀಗ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿ ಬಸವರಾಜು ತಾನು ಪರಭಾಷೆಗಳ ಚಲನಚಿತ್ರಗಳಲ್ಲಿ ಸೈಡ್ ಆ್ಯಕ್ಟಿಂಗ್, ಪ್ರೊಡೆಕ್ಷನ್, ಕ್ಯಾಮರಾ ಕೆಲಸ ನಿರ್ವಹಿಸಿದ್ದನೆನ್ನಲಾಗಿದೆ. ಪ್ರಸಿದ್ದ ನಾಯಕ ನಟರ ಜತೆಗೆ ಫೋಟೋ ತೆಗೆಸಿಕೊಳ್ಳುವ ಚಾಳಿ ಈತನಿಗಿದ್ದು ಅದೇ ಫೋಟೋಗಳನ್ನು ಯುವತಿಯರು, ಮಹಿಳೆಯರಿಗೆ ತೋರಿಸಿ ವಂಚನೆಯ ಬಲೆಗೆ ಬೀಳಿಸಿದ್ದ. ಸದ್ಯಕ್ಕೆ ಈ ಕುರಿತು ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Comments are closed.