ಕರ್ನಾಟಕ

ಲಾಕ್​ಡೌನ್​ ಫ್ರೀ ರಾಜ್ಯ: ಇನ್ನು ಎಲ್ಲಿಯೂ ಲಾಕ್​ಡೌನ್​ ಇಲ್ಲ: ಯಡಿಯೂರಪ್ಪ

Pinterest LinkedIn Tumblr


ಬೆಂಗಳೂರು(ಜು.21): ಮುಖ್ಯಮಂತ್ರಿ ಬಿ.ಎಸ್​​​ ಯಡಿಯೂರಪ್ಪ ರಾಜ್ಯವನ್ನುದ್ದೇಶಿಸಿ ಭಾಷಣ ಮಾಡಿದರು. ಇಂದು ಸಂಜೆ 5 ಗಂಟೆಗೆ ಸಾಮಾಜಿಕ ಜಾಲತಾಣದಲ್ಲಿ ಆನ್​​ಲೈನ್​​ ಮೂಲಕ ರಾಜ್ಯದ ಜನತೆಯನ್ನು ಉದ್ದೇಶಿಸಿ ಮಾತಾಡಿದ ಯಡಿಯೂರಪ್ಪರ ಭಾಷಣ ಫೇಸ್​​ಬುಕ್​​, ಟ್ವಿಟರ್​​, ಇನ್ಸ್ಟಾಗ್ರಾಮ್, ಯೂಟ್ಯೂಬ್​​​​​​ ಲೈವ್​​ನಲ್ಲಿ ಪ್ರಸಾರವಾಯ್ತು.

ಪ್ರಸ್ತುತ ದೇಶಾದ್ಯಂತ ಕೋವಿಡ್​-19 ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಕರ್ನಾಟಕದಲ್ಲಿ ಕೊರೋನಾ ತಹಬದಿಗೆ ತರುವಲ್ಲಿ ಆರಂಭದಲ್ಲಿ ನಾವು ಯಶಸ್ವಿಯಾಗಿದ್ದೆವು. ಆದರೀಗ, ಇತ್ತೀಚೆಗೆ ಬೆಂಗಳೂರಿನಲ್ಲಿ ಮಾತ್ರ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಮೊದಲಿನಷ್ಟು ಕೊರೋನಾ ತಡೆಯಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.

ಕೊರೋನಾ ನಿಯಂತ್ರಣಕ್ಕೆ ಪರಿಹಾರವೊಂದೇ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮಾತ್ರ. ನಾವು ಕಟ್ಟುನಿಟ್ಟಾಗಿ ಈ ನಿಯಮ ಪಾಲಿಸಿದ್ರೆ ಮಾತ್ರ ಕೊರೋನಾ ನಿಯಂತ್ರಿಸಲು ಸಾಧ್ಯವಿಲ್ಲ ಎಂದರು.

ಹೀಗೆ ಮುಂದುವರಿದ ಅವರು, ಶಾಸಕರು, ಸಚಿವರು, ವೈದ್ಯರು, ಪೊಲೀಸರು ಸೇರಿದಂತೆ ಆಶಾ ಕಾರ್ಯಕರ್ತರು ಹಗಲು ರಾತ್ರಿಯೆನ್ನದೇ ಕೊರೋನಾ ವಿರುದ್ಧ ಹೋರಾಡುತ್ತಿದ್ದಾರೆ. ಇವರು ತಮ್ಮ ಪ್ರಾಣದ ಹಂಗು ತೊರೆದು ನಮಗಾಗಿ ಕೆಲಸ ಮಾಡಬೇಕಾದರೇ ನಾವು ಸರ್ಕಾರದ ಕೋವಿಡ್​​-19 ರೂಲ್ಸ್​​ ಮಾಡಲು ಸಾಧ್ಯವಿಲ್ಲವೇ. ನಾವು ಕೊರೋನಾ ನಿಯಂತ್ರಣಕ್ಕೆ ಮಾಸ್ಕ್​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಕೆಲಸ ಮಾಡಲೇಬೇಕು ಎಂದರು.

ಕೋವಿಡ್​​-19 ನಿಯಂತ್ರಣಕ್ಕೆ ತಜ್ಞರು ನೀಡಿದ 5T ಸ್ಟ್ರಾಟಜಿ ಬಹಳ ಮುಖ್ಯವಾದದ್ದು. 5T ಎಂದರೇ ಟ್ರೇಸ್​​​, ಟ್ರ್ಯಾಕ್​​, ಟೆಸ್ಟ್​, ಟ್ರೀಟ್​​ ಅಂಡ್​​ ಟೆಕ್ನಾಲಜಿ ಎಂದರ್ಥ. ಇದನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳಬೇಕು. ನಾವು ಇದರಲ್ಲಿ ಮುಂಚೂಣಿಯಲ್ಲಿದ್ದೇವೆ. ಎಲ್ಲರೂ ಇದನ್ನು ಪಾಲಿಸಿದರೇ ಕೊರೋನಾ ನಿಯಂತ್ರಣ ಮಾಡಬಹುದು ಎಂದು ಹೇಳಿದರು.

ಕೋವಿಡ್​​ ಮತ್ತು ನಾನ್​​ ಕೋವಿಡ್​​ ರೋಗಿಗಳ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಿಸಿಕೊಳ್ಳಲು ಇದ್ದ ಗೊಂದಲ ಸರಿಪಡಿದಲಾಗಿದೆ. ಶೇ.80ಕ್ಕಿಂತ ಹೆಚ್ಚು ಸೋಂಕಿತರಲ್ಲಿ ಯಾವುದೇ ರೋಗಲಕ್ಷಣ ಇಲ್ಲ. ಹೀಗಾಗಿ ಅವರನ್ನು ಹೋಮ್​​ ಮತ್ತು ಬೇರೆ ಎಲ್ಲಾದರೂ ಇರಿಸಲಾಗುತ್ತಿದೆ. ಇದಕ್ಕೆ ಬೆಂಗಳೂರಿನ ಜನ ಸಹಕರಿಸಬೇಕು ಎಂದು ಮನವಿ ಮಾಡಿದರು.

ಹಾಗೆಯೇ ಬಿಬಿಎಂಪಿ, ಸರ್ಕಾರ ಎಲ್ಲರೂ ಕೊರೋನಾ ನಿಯಂತ್ರಣಕ್ಕೆ ಶ್ರಮಿಸುತ್ತಿದ್ದೇವೆ. ಇದಕ್ಕಾಗಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ 11 ಸಾವಿರ ಬೆಡ್​ ವ್ಯವಸ್ಥೆ ಮಾಡಲಾಗಿದೆ. ಹೊರ ರಾಜ್ಯದಿಂದ ಬರುವ ಎಲ್ಲರ ಮೇಲೆಯೂ ನಿಗಾ ಇಡಲಾಗುತ್ತಿದೆ ಎಂದು ತಿಳಿಸಿದರು.ಕೋವಿಡ್-19 ಉಪಕರಣ ಖರೀದಿಯಲ್ಲಿ ಯಾವುದೇ ವ್ಯವಹಾರ ನಡೆದಿಲ್ಲ. ಯಾವುದೇ ಮಾಹಿತಿಯನ್ನು ನಾವು ಕೊಡಲು ಸಿದ್ದರಿದ್ದೇವೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಬಂದು ಯಾವುದೇ ದಾಖಲೆ ಕೇಳಿದರೂ ನೀಡಲು ನಾವು ಸಿದ್ದರಿದ್ದೇವೆ ಎಂದರು.ಕರ್ನಾಟಕವೂ ಕೊರೋನಾ ಎದುರಿಸಲು ಸಜ್ಜಾಗಿದೆ. ಸರ್ಕಾರವೂ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ. ನೀವು ಮನೆಯಲ್ಲೇ ಇರಬೇಕು. ಸಾಧ್ಯವಾದಷ್ಟು ಕಡಿಮೆ ತಿರುಗಾಟ ಮಾಡಬೇಕು. ಮಾಸ್ಕ್​​​​, ಸಾಮಾಜಿಕ ಅಂತರ ಮಾತ್ರ ಕಡ್ಡಾಯ ಎಂದು ಪುನರುಚ್ಚರಿಸಿದರು.

ನಾಳೆಯಿಂದ ಬೆಂಗಳೂರಿನಲ್ಲಿ ಲಾಕ್​​ಡೌನ್ ಇರುವುದಿಲ್ಲ. ಸರ್ಕಾರಕ್ಕೆ ಆರ್ಥಿಕ ಸಂಪನ್ಮೂಲ ಕ್ರೋಢೀಕರಣ ಬಹಳ ಮುಖ್ಯ. ಹಾಗಾಗಿ ಬೆಂಗಳೂರಿನಲ್ಲಿ ನಾಳೆಯಿಂದ ಯಾವುದೇ ಲಾಕ್​​ಡೌನ್ ಇಲ್ಲ ಎಂದು ಸ್ಪಷ್ಟಪಡಿಸಿದರು.

Comments are closed.