ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಏರಿಮುಖವಾಗಿಯೇ ಸಾಗಿದ್ದು, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬುಧವಾರ 2270 ಮಂದಿಗೆ ಪಾಸಿಟಿವ್ ದೃಢಪಟ್ಟಿದ್ದು, ಇದರೊಂದಿಗೆ ರಾಜಧಾನಿಯಲ್ಲಿ ಸೋಂಕಿತರ ಸಂಖ್ಯೆ 50 ಸಾವಿರದ ಗಡಿ ದಾಟಿದೆ.
ಇಂದು ರಾಜ್ಯದಲ್ಲಿ 5503 ಹೊಸ ಪ್ರಕರಣಗಳು ವರದಿಯಾಗಿದ್ದು, 92 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಇದರಿಂದ ಒಟ್ಟು ಸೋಂಕಿತರ ಸಂಖ್ಯೆ 1,12,504ಕ್ಕೇರಿಕೆಯಾಗಿದೆ.
ಇನ್ನು ರಾಜ್ಯದಲ್ಲಿ ಚೇತರಿಕೆ ಪ್ರಮಾಣವೂ ಉತ್ತಮವಾಗಿದ್ದು, ದಿನವೊಂದರಲ್ಲಿ 2397 ಮಂದಿ ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಇದುವರೆಗೆ ಒಟ್ಟು 2147 ಮಂದಿ ಸಾವನ್ನಪ್ಪಿದ್ದು, 67447 ಸಕ್ರಿಯ ಪ್ರಕರಣಗಳಿವೆ. ಈ ಪೈಕಿ 369 ಮಂದಿಯ ಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಇಂದು ರಾಜಧಾನಿ ಬೆಂಗಳೂರು ನಗರದಲ್ಲಿ 2,270 ಮಂದಿ ಸೋಂಕಿತರು ಪತ್ತೆಯಾಗಿದ್ದು, 30 ಮಂದಿ ಮೃತಪಟ್ಟಿದ್ದಾರೆ. ಇದರಿಂದ ನಗರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 51,091ಕ್ಕೆ ತಲುಪಿದ್ದು, 36,224 ಸಕ್ರಿಯ ಪ್ರಕರಣಗಳಿವೆ.
ಉಳಿದಂತೆ ಬಳ್ಳಾರಿಯಲ್ಲಿ 338, ಬೆಳಗಾವಿಯಲ್ಲಿ 279, ದಾವಣಗೆರೆಯಲ್ಲಿ 225, ದಕ್ಷಿಣ ಕನ್ನಡದಲ್ಲಿ 208, ಮೈಸೂರಿನಲ್ಲಿ 200, ಧಾರವಾಡದಲ್ಲಿ 175, ಉಡುಪಿಯಲ್ಲಿ 173, ಕಲಬುರಗಿಯಲ್ಲಿ 168, ಶಿವಮೊಗ್ಗದಲ್ಲಿ 131, ತುಮಕೂರಿನಲ್ಲಿ 128, ಯಾದಗಿರಿಯಲ್ಲಿ 114 ಪ್ರಕರಣಗಳು ವರದಿಯಾಗಿವೆ.
ಚಿಕ್ಕಬಳ್ಳಾಪುರದಲ್ಲಿ 96, ಹಾಸನದಲ್ಲಿ 95, ಬೀದರ್‌ನಲ್ಲಿ 91, ವಿಜಯಪುರದಲ್ಲಿ 90, ಕೊಪ್ಪಳದಲ್ಲಿ 84, ಉತ್ತರಕನ್ನಡದಲ್ಲಿ 75, ರಾಯಚೂರಿನಲ್ಲಿ 73, ಮಂಡ್ಯದಲ್ಲಿ 70, ಗದಗದಲ್ಲಿ 61, ಬಾಗಲಕೋಟೆಯಲ್ಲಿ 57, ರಾಮನಗರದಲ್ಲಿ 56, ಚಿತ್ರದುರ್ಗದಲ್ಲಿ 52, ಹಾವೇರಿಯಲ್ಲಿ 50, ಬೆಂಗಳೂರು ಗ್ರಾಮಾಂತರದಲ್ಲಿ 49, ಕೋಲಾರದಲ್ಲಿ 34, ಚಿಕ್ಕಮಗಳೂರಿನಲ್ಲಿ 33, ಚಾಮರಾಜನಗರದಲ್ಲಿ 20, ಕೊಡಗಿನಲ್ಲಿ 8 ಪ್ರಕರಣಗಳು ವರದಿಯಾಗಿವೆ.
ಬಳ್ಳಾರಿಯಲ್ಲಿ 2, ಬೆಳಗಾವಿಯಲ್ಲಿ 3, ದಾವಣಗೆರೆಯಲ್ಲಿ 4, ದಕ್ಷಿಣ ಕನ್ನಡದಲ್ಲಿ 7, ಮೈಸೂರಿನಲ್ಲಿ 5, ಧಾರವಾಡದಲ್ಲಿ 7, ಉಡುಪಿಯಲ್ಲಿ 4, ಕಲಬುರಗಿಯಲ್ಲಿ 10, ತುಮಕೂರಿನಲ್ಲಿ 3, ಚಿಕ್ಕಬಳ್ಳಾಪುರದಲ್ಲಿ 1, ಬೀದರ್‌ನಲ್ಲಿ 1, ಹಾಸನದಲ್ಲಿ 4, ವಿಜಯಪುರ, ಕೊಪ್ಪಳದಲ್ಲಿ ತಲಾ 1, ಉತ್ತರಕನ್ನಡದಲ್ಲಿ 2, ರಾಯಚೂರಿನಲ್ಲಿ 2, ಗದಗದಲ್ಲಿ 3, ಬಾಗಲಕೋಟೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ರಾಜ್ಯದಲ್ಲಿ ಬೆಂಗಳೂರು ನಗರ ಸೋಂಕಿತ ಪ್ರಕರಣಗಳಲ್ಲಿ ಮೊದಲನೇ ಸ್ಥಾನದಲ್ಲಿದ್ದು, ಬಳ್ಳಾರಿ ಎರಡು, ದಕ್ಷಿಣ ಕನ್ನಡ ಹಾಗೂ ಕಲಬುರಗಿ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದೆ.
Comments are closed.