ಶಿವಮೊಗ್ಗ: ನಟ ವಿಜಯ್ ರಾಘವೇಂದ್ರ ಕಾರಿಗೆ ಪೆಟ್ರೋಲ್ ಬದಲಿ ಡೀಸೆಲ್ ಹಾಕಿ ಬಂಕ್ ಸಿಬ್ಬಂದಿ ಎಡವಟು ಮಾಡಿದ್ದಾರೆ.
ವಿಜಯ್ ರಾಘವೇಂದ್ರ ಕುಟುಂಬದ ಜೊತೆ ಶಿವಮೊಗ್ಗ ಪ್ರವಾಸಕ್ಕೆ ಬಂದಿದ್ದರು. ಜೋಗ ನೋಡಿಕೊಂಡು ನಗರದ ಬಂಕ್ ನಲ್ಲಿ ಕಾರ್ ಗೆ ಪೆಟ್ರೋಲ್ ತುಂಬಿಸುವಂತೆ ಹೇಳಿದ್ದಾರೆ. ನೆಚ್ಚಿನ ನಟನನ್ನು ನೋಡಿದ ಖುಷಿಯಲ್ಲಿ ಬಂಕ್ ಸಿಬ್ಬಂದಿ ಪೆಟ್ರೋಲ್ ಬದಲಿಗೆ ಡೀಸೆಲ್ ತುಂಬಿಸಿದ್ದಾರೆ.
ತಪ್ಪಿನ ಅರಿವಾಗುತ್ತಲೇ ಎಚ್ಚೆತ್ತ ಸಿಬ್ಬಂದಿ ವಿಜಯ್ ರಾಘವೇಂದ್ರ ಅವರ ಬಳಿ ಕ್ಷಮೆ ಕೇಳಿದ್ದಾರೆ. ನಂತರ ವಿಜಯ್ ರಾಘವೇಂದ್ರ ಕಾರ್ ನ್ನು ಸರ್ವಿಸ್ ಗೆ ಕಳುಹಿಸಲಾಗಿದೆ. ಕೊನೆಗೆ ಬೇರೆ ಕಾರಿನಲ್ಲಿ ವಿಜಯ್ ರಾಘವೇಂದ್ರ ಮತ್ತು ಕುಟುಂಬದವರು ಬೇರೆ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದಾರೆ.
Comments are closed.