ಕರ್ನಾಟಕ

ರಾಜ್ಯದಲ್ಲಿ ಇಂದು (ಮಂಗಳವಾರ) 6257 ಕೊರೋನಾ ಪ್ರಕರಣಗಳು ಪತ್ತೆ: 86 ಬಲಿ

Pinterest LinkedIn Tumblr


ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ 6257 ಕೋವಿಡ್ ಪ್ರಕರಣಗಳು ( ಭಾನುವಾರ 12 ಗಂಟೆಯಿಂದ ನಿನ್ನೆ 12 ಗಂಟೆಯವರೆಗೂ) ವರದಿಯಾಗಿದ್ದು, 6473 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಆಸ್ಪತ್ರೆಯಿಂದ ಬಿಡುಗಡೆಯಾದ ಒಟ್ಟು ರೋಗಿಗಳ ಸಂಖ್ಯೆ 10 ಲಕ್ಷದ 55 ಸಾವಿರದ 99 ಆಗಿದೆ.

ಇಂದು 86 ರೋಗಿಗಳು ಸೇರಿದಂತೆ ಈವರೆಗೂ ಸೋಂಕಿನಿಂದ ಮೃತಪಟ್ಟವರ ಒಟ್ಟು ಸಂಖ್ಯೆ 3398 ಆಗಿದೆ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 79 ಸಾವಿರದ 606 ಆಗಿದೆ.

ಇಂದು ಬೆಂಗಳೂರು ನಗರದಲ್ಲಿ 1610, ಬಳ್ಳಾರಿ 736, ಬೆಳಗಾವಿ 575, ಧಾರವಾಡ 276, ದಕ್ಷಿಣ ಕನ್ನಡ-243, ಮೈಸೂರು 238, ಉಡುಪಿ 219, ರಾಯಚೂರು 201, ಶಿವಮೊಗ್ಗ 189, ದಾವಣಗೆರೆ 172, ಕೊಪ್ಪಳ 169, ಕಲಬುರಗಿ 156, ಹಾಸನ 146, ಮಂಡ್ಯ 141, ಬಾಗಲಕೋಟೆ 135, ವಿಜಯಪುರ 121, ಯಾದಗಿರಿ 102, ರಾಮನಗರ 96, ಚಿಕ್ಕಮಗಳೂರು 93, ತುಮಕೂರು 89, ಗದಗ 78, ಬೀದರ್ 73, ಉತ್ತರ ಕನ್ನಡ 73, ಚಾಮರಾಜನಗರ 72, ಕೋಲಾರ 69, ಚಿತ್ರದುರ್ಗ 47, ಕೊಡಗು 41, ಹಾವೇರಿ 36, ಚಿಕ್ಕಬಳ್ಳಾಪುರ 33, ಬೆಂಗಳೂರು ಗ್ರಾಮಾಂತರದಲ್ಲಿ 28 ಪ್ರಕರಣಗಳು ವರದಿಯಾಗಿವೆ.

Comments are closed.