ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಸಂತೋಷ್ ಜೀ ದೆಹಲಿಯಿಂದ ವಾಪಸ್ ಬಂದಾಗಿನಿಂದ ರಾಜ್ಯ ಬಿಜೆಪಿ ಪಾಳಯದಲ್ಲಿ ಸಾಕಷ್ಟು ರಾಜಕೀಯ ಚಟುವಟಿಕೆ ಗರಿಗೆದರಿವೆ. ದೆಹಲಿಯಿಂದ ಬಂದ ನಂತರ ಸಚಿವರ ಮೌಲ್ಯಮಾಪನ ಮಾಡ್ತಿರೋ ಸಂತೋಷ್ ಜೀ, ನಾಯಕತ್ವದ ಬದಲಾವಣೆಯ ಅಭಿಪ್ರಾಯ ಸಂಗ್ರಹ ಮಾಡ್ತಿದ್ದಾರೆ.
ಇದರ ಬೆನ್ನಲ್ಲೇ ಬಿಜೆಪಿಯ ಪದಾಧಿಕಾರಿಗಳ ಸಭೆಯನ್ನು ನಡೆಸಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ಕುಮಾರ್ ಕಟೀಲ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು, ರಾಜ್ಯ ರಾಜಕೀಯ ದೃಷ್ಟಿಯಿಂದ ಈ ಸಭೆ ಬಹಳ ಮಹತ್ವದ್ದು ಎನ್ನಲಾಗುತ್ತಿದೆ. ಪದಾಧಿಕಾರಿಗಳ ಸಭೆಯಲ್ಲಿ ಬಿಎಸ್ವೈಗೆ ಪರ್ಯಾಯ ನಾಯಕತ್ವ ಬದಲಾವಣೆ ಚರ್ಚೆ ನಡೆಯಲಿದೆ.
ಸಭೆಯಲ್ಲಿ ಇಂದೇ ಹೊಸ ಸಿಎಂ ಹೆಸರು ಅಂತಿಮವಾಗಲಿದೆಯಾ..? ಸಿಎಂ ಬಿಎಸ್ವೈ ಪದ ತ್ಯಾಗಕ್ಕೆ ಇಂದೇ ಸಮಯ ನಿಗದಿ ಆಗುತ್ತಾ..? ಅನ್ನೋ ಕುತೂಹಲ ಮೂಡಿದೆ. ಹೀಗಾಗಿ ರಾಜ್ಯ ರಾಜಕಾರಣದ ಚಿತ್ತ ಸಂತೋಷ್ ಜೀ ಸಭೆಯತ್ತ ನೆಟ್ಟಿದೆ. ನಾಯಕತ್ವ ಬದಲಾವಣೆ ವಿಚಾರದ ಜೊತೆಗೆ ಸಚಿವ ಸಂಪುಟ ವಿಸ್ತರಣೆ ಕುರಿತ ವಿಚಾರವೂ ಕಟೀಲ್ ಜೊತೆ ಸಂತೋಷ್ ಜೀ ಚರ್ಚಿಸಲಿದ್ದಾರೆ.
ಸಂಪುಟದಲ್ಲಿ ಹೊಸದಾಗಿ ಯಾರಿಗೆ ಅವಕಾಶ ಕೊಡಬೇಕು? ಈಗಿರುವರಲ್ಲಿ ಯಾರನ್ನು ತೆಗೆಯಬೇಕು? ಎನ್ನುವ ಬಗ್ಗೆ ಅಂತಿಮ ತೀರ್ಮಾನ ಆಗಲಿದೆ. ಈ ಮೂಲಕ ಈ ಬಾರಿಯ ಸಂಪುಟ ಪುನರ್ ರಚನೆಯಲ್ಲಿ ಸಂತೋಷ್ ತೀರ್ಮಾನವೇ ಪೈನಲ್ ಆಗಬಹುದು ಎನ್ನಲಾಗಿದೆ.
Comments are closed.