ಬೆಂಗಳೂರು: ಕರೊನಾ ಸೋಂಕಿತರ ವಿಚಾರದಲ್ಲಿ ಕರ್ನಾಟಕ ದಿನವೂ ಹೊಸ ದಾಖಲೆಗಳನ್ನೇ ಬರೆಯುತ್ತಿದೆ. ನಿನ್ನೆಯಷ್ಟೇ ಸೋಂಕಿತರ ಸಂಖ್ಯೆ ಎರಡನೇ ಬಾರಿ 9 ಸಾವಿರ ಗಡಿ ದಾಟಿತ್ತು. ಇಂದು 9,860 ಜನರಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿದೆ. ಜತೆಗೆ, ಒಂದೇ ದಿನದಲ್ಲಿ ಅತ್ಯಧಿಕ ಜನರು ಸೋಂಕಿಗೆ ಒಳಗಾದ ದಾಖಲೆಯೂ ಇದಾಗಿದೆ.
ಸದ್ಯ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3,61,341ಕ್ಕೆ ಏರಿದಂತಾಘಿದೆ. ದಾಟಿದೆ. ಅಂತೆಯೇ ಸಕ್ರಿಯ ಪ್ರಕರಣಗಳ ಸಂಖ್ಯೆ ಕೂಡ ಒಂದು ಲಕ್ಷದ ಸಮೀಪಕ್ಕೆ ಅಂದರೆ 94,459 ಆಗಿದೆ.
ಇನ್ನು, ಇಂದು ಚೇತರಿಕೆ ಕಂಡವರ ಸಂಖ್ಯೆ ಕೂಡ ಇಳಿಕೆಯಾಗಿದ್ದು, 6,287 ಜನರು ಗುಣವಾಗಿದ್ದಾರೆ. ಮೃತರ ಸಂಖ್ಯೆ ಕೂಡ ಶತಕ ದಾಟುತ್ತಲೇ ಇದ್ದು, ಇಂದು ಕೂಡ 113 ಜನರು ಮೃತಪಟ್ಟಿದ್ದಾರೆ. ಒಟ್ಟು ಸಾವಿನ ಸಂಖ್ಯೆ 5,950 ಆಗಿದೆ. ಒಟ್ಟು 751 ಜನರ ಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರಿನಲ್ಲಿ ಇಂದು 3,420 ಜನರಲ್ಲಿ ಸೋಂಕು ಕಂಡು ಬಂದಿದೆ ಹಾಗೂ ಒಟ್ಟು ಸೋಂಕಿತರ ಸಂಖ್ಯೆ 1,35,512ಕ್ಕೆ ತಲುಪಿದೆ. ಒಟ್ಟು 2,383 ಜನರು ಚೇತರಿಕೆ ಕಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಗುಣವಾದರ ಒಟ್ಟು ಸಂಖ್ಯೆ 93,563 ಆಗಿದೆ. ರಾಜಧಾನಿಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 39,911ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ ಒಟ್ಟು 32 ಜನರು ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 2,037ಕ್ಕೆ ತಲುಪಿದಂತಾಗಿದೆ.
ನಿನ್ನೆ ಒಂದೇ ದಿನ 73,317 ಜನರಿಗೆ ಕರೊನಾ ಟೆಸ್ಟ್ ಮಾಡಲಾಗಿದ್ದು, ಈವರೆಗೆ ರಾಜ್ಯದಲ್ಲಿ ಈವರೆಗೆ ಒಟ್ಟು 30,52,754 ಜನರಿಗೆ ಕೋವಿಡ್ ಟೆಸ್ಟ್ ಮಾಡಿಸಲಾಗಿದೆ.
Comments are closed.