ಕರ್ನಾಟಕ

ಮಲೆನಾಡಿನಲ್ಲಿ ಮುಂದಿನ 4 ದಿನ ಭಾರೀ ಮಳೆ ಸಾಧ್ಯತೆ

Pinterest LinkedIn Tumblr

ಬೆಂಗಳೂರು (ಸೆಪ್ಟೆಂಬರ್ 2): ಬಾರಿಯ ಮಾನ್ಸೂನ್ಅಂದುಕೊಂಡ ಮಟ್ಟಿಗೆ ಮಳೆ ನೀಡಿಲ್ಲ. ಜೂನ್​-ಜುಲೈನಲ್ಲಿ ಕೊಂಚ ತಗ್ಗಿದ್ದ ಮಳೆ ಆಗಸ್ಟ್ನಲ್ಲಿ ಉತ್ತಮವಾಗಿ ಸುರಿದಿತ್ತು. ಈಗ ಸೆಪ್ಟೆಂಬರ್ಆರಂಭದಲ್ಲಿ ಮತ್ತೆ ವರುಣ ಅಬ್ಬರಿಸುತ್ತಿದ್ದಾನೆ. ಮುಂದಿನ ನಾಲ್ಕು ದಿನಗಳಕಾಲ ಮಲೆನಾಡು ಭಾಗದಲ್ಲಿ ಭಾರೀ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಅಲ್ಲದೆ. ಭಾಗದಲ್ಲಿ ಆರೆಂಜ್ಅಲರ್ಟ್ಘೋಷಣೆ ಮಾಡಿದೆ.

ಮುಂದಿನ ನಾಲ್ಕು  ದಿನಗಳ ಕಾಲ ಮಲೆನಾಡು ಭಾಗದಲ್ಲಿ ಭಾರೀ ಮಳೆ ಆಗಲಿದೆ. ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಲ್ಲಿ ಸೆಪ್ಟೆಂಬರ್ 5ರವರಗೆ ಭಾರೀ ಮಳೆ ನಿರೀಕ್ಷೆ ಇದ್ದು ಆರೆಂಜ್​ ಅಲರ್ಟ್ ಘೋಷಿಸಲಾಗಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮುಂದಿನ 3 ದಿನ ಹೆಚ್ಚಿನ ಮಳೆ ನಿರೀಕ್ಷೆ ಇದ್ದು ಎಲ್ಲೋ ಅಲರ್ಟ್ ನೀಡಲಾಗಿದೆ.

ಉತ್ತರ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಮುಂದಿನ ದಿನಗಳಲ್ಲಿ ಏರಿಕೆಯಾಗಲಿದೆ. ದಕ್ಷಿಣ ಒಳನಾಡಿನಲ್ಲಿ ಸೆಪ್ಟೆಂಬರ್ 5ರವರಗೆ ವ್ಯಾಪಕ ಮಳೆಯಾಗಲಿದೆ. ಬೆಂಗಳೂರಿನಲ್ಲಿ ನಿತ್ಯ ರಾತ್ರಿ ಮಳೆ ಆಗುತ್ತಲೇ ಇದೆ. ಮುಂದಿನ ಎರಡು ದಿನಗಳವರಗೆ ಬೆಂಗಳೂರಿನಲ್ಲೂ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ ಎಸ್ ಪಾಟೀಲ್ ಹೇಳಿದ್ದಾರೆ.

ನಿನ್ನೆ ಕರಾವಳಿ ಭಾಗದ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಿದೆ. ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಕೆಲವು ಕಡೆ ಮಾತ್ರ ಮಳೆಯಾಗಿದೆ. ಶಿರಾಡಿ, ಕುಮಟಾ, ಅಂಕೋಲಾ ತಲಾ ಎಂಟು ಸೆಂ.ಮೀ ಮಳೆಯಾಗಿದ್ದು, ಗೋಕರ್ಣ, ಕದರಾದಲ್ಲಿ ತಲಾ ಏಳು ಸೆಂ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ತಿಳಿಸಿದೆ.

Comments are closed.