ಕರ್ನಾಟಕ

ಡ್ರಗ್ಸ್ ಜಾಲ : ಬಾಲಿವುಡ್ ಸ್ಟಾರ್ಸ್ ಗಳಿಗೆ ಬಿಗ್ ಶಾಕ್ ನೀಡಿರುವ ಎನ್ ಸಿ ಬಿ.

Pinterest LinkedIn Tumblr

ನವದೆಹಲಿ :  ಡ್ರಗ್ಸ್ ಪ್ರಕರಣದಲ್ಲಿ ಬಾಲಿವುಡ್ ನಲ್ಲಿಯೂ ನಂಟಿರುವ ಬಗ್ಗೆ ಮಾಹಿತಿ ಕಲೆ ಹಾಕಿರುವಂತ ಎನ್ ಸಿ ಬಿ ಅಧಿಕಾರಿಗಳು,  ಬಾಲಿವುಡ್ ಗೂ ಬಿಗ್ ಶಾಕ್ ನೀಡೋದಕ್ಕೆ ಮುಂದಾಗಿದೆ. ನಶೆಯಲ್ಲಿದ್ದಂತ 25 ಬಾಲಿವುಡ್ ಸ್ಟಾರ್ಸ್ ಗಳಿಗೆ ಸದ್ಯದಲ್ಲಿಯೇ ಬುಲಾವ್ ನೀಡಲಿದೆ ಎನ್ನಲಾಗುತ್ತಿದೆ.

ಸ್ಯಾಂಡಲ್ ವುಡ್ ಡ್ರಗ್ಸ್ ಜಾಲದ ಬಗ್ಗೆ ದಿನಕ್ಕೊಂದು ತಿರುವು ಪಡೆಯುತ್ತಿರುವ ಬೆನ್ನಲ್ಲೇ, 25 ಬಾಲಿವುಡ್ ನಟ-ನಟಿಯರು, ನಿರ್ದೇಶಕರು, ನಿರ್ಮಾಪಕರಿಗೆ NCB ಬಿಗ್ ಶಾಕ್ ನೀಡಲು ಮುಂದಾಗಿದೆ.

ರಿಯಾ ನೀಡಿರುವ ಮಾಹಿತಿಯ ಅನುಸಾರ ನಶೆಯಲ್ಲಿದ್ದಂತ 25 ಬಾಲಿವುಡ್ ನ ಸ್ಟಾರ್ಸ್ ಗಳ ಪಟ್ಟಿಯನ್ನು ಎನ್ ಸಿ ಬಿ ತಯಾರಿಸಿದೆಯಂತೆ. ಇಂತಹ ಲೀಸ್ಟ್ ಆಧರಿಸಿ ಸಾಕ್ಷಿ ಶೋಧಿಸುತ್ತಿರುವ ಎನ್ ಸಿ ಬಿ ತಂಡ, ಬಾಲಿವುಡ್ ನ 25 ಸ್ಟಾರ್ಸ್ ಗೆ ಸದ್ಯದಲ್ಲಿಯೇ ಬುಲಾವ್ ನೀಡಲಿದೆ ಎನ್ನಲಾಗುತ್ತಿದೆ.

 

Comments are closed.