ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಕಾಡಂಚಿನ ಹಬ್ಬೂರಿನಲ್ಲಿ ಕೊಟ್ಟಿಗೆಯಲ್ಲಿ ಕಟ್ಟಿದ ಕರುವಿನ ಮೇಲೆ ರಾತ್ರಿ ಚಿರತೆಯೊಂದು ದಾ#ಳಿ ನಡೆಸಿರುವ ಘಟನೆ ನಡೆದಿದೆ..
ಗ್ರಾಮದ ನಿವಾಸಿ ಬೀರೇಗೌಡರು ತಮ್ಮ ಕೊಟ್ಟಿಗೆಯಲ್ಲಿ ಕಟ್ಟಿದ ಕರುವಿನ ಮೇಲೆ ರಾತ್ರಿ ಸುಮಾರು ಎರಡು ಗಂಟೆ ಸಮಯದಲ್ಲಿ ಚಿರತೆ ದಾ#ಳಿ ನಡೆಸಿದೆ ದಾ#ಳಿ ನಡೆಸಿದಾಗ ಕರು ಕಿರುಚಾಡುವುದನ್ನು ಕೇಳಿದ ಮನೆ ಮಾಲಿಕ ಬಿರೇಗೌಡರು ಗಾಬರಿಯಿಂದ ಹೊರಬಂದು ನೋಡಿದಾಗ ಚಿರತೆ ಕರುವಿನ ಮೇಲೆ ದಾ#ಳಿ ನಡೆಸುತ್ತಿತ್ತು. ಅವರು ಕೂಗಿಕೊಂಡ ವೇಳೆ ಅಕ್ಕಪಕ್ಕದ ಮನೆಯವರೆಲ್ಲಾ ಸೇರಿ ಕೂಗಾಡಿದ್ದರಿಂದ ಚಿರತೆಯು ಕರುವನ್ನು ಕೊಂ#ದು ಸ್ಥಳದಲ್ಲೇ ಬಿಟ್ಟು ಪಕ್ಕದಲ್ಲೇ ಇರುವ ಶೆಟ್ಟಹಳ್ಲಕಿ ಕಾಡಿನತ್ತ ಪರಾರಿಯಾಗಿದೆ ಎಂದು ಬೀರೇಗೌಡ ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಕಾಡಂಚಿನ ಗ್ರಾಮಗಳಲ್ಲಿ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು ಕಾಡುಪ್ರಾಣಿಗಳ ಹಾವಳಿ ತಡೆಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ವಿಫಲರಾಗಿದ್ದು ಚಿರತೆ ಸೆ#ರೆಗೆ ಬೋನಿಡಬೇಕೆಂದು ಅಬ್ಬುರು ಗ್ರಾಮದ ಕುಮಾರ್ ಮನವಿ ಮಾಡಿದ್ದಾರೆ.
Comments are closed.