ಬೆಂಗಳೂರು: ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಶಾಲೆ ಪ್ರಾರಂಭಕ್ಕೆ ಅಗತ್ಯವಾಗಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸರ್ಕಾರಕ್ಕೆ ವಿವಿಧ ಅಂಶಗಳನ್ನ ಶಿಫಾರಸು ಮಾಡಿದೆ. ಈ ಅಂಶಗಳ ಬಗ್ಗೆ ಪಾಲಕರಲ್ಲಿ ಜಾಗೃತಿ ಮೂಡಿಸಿ ಧೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಮಕ್ಕಳ ಹಕ್ಕು ರಕ್ಷಣಾ ಆಯೋಗ ಸಲಹೆ ನೀಡಿದೆ.
ಶಾಲೆಗಳ ಪ್ರಾರಂಭಕ್ಕೆ:
1) ಈ ಸಾಲಿನ ವರ್ಷವನ್ ಪರೀಕ್ಷಾ ರಹಿತ ಕಲಿಕಾ ವರ್ಷವೆಂದು ಘೋಷಿಸಬೇಕು.
2) ಮಕ್ಕಳ ಸಂಖ್ಯೆ 30ಕ್ಕಿಂತ ಕಡಿಮೆ ಇರುವ ಶಾಲೆಗಳನ್ನ ಮೊದಲು ಆರಂಭಿಸಬೇಕು. ಮೊದಲ 15 ದಿನ ಈ ಶಾಲೆಗಳು ಅರ್ಧ ದಿನ ಮಾತ್ರ ಕಾರ್ಯನಿರ್ವಹಿಸಬೇಕು.
3) ಹೆಚ್ಚು ಮಕ್ಕಳಿರುವ ಶಾಲೆಗಳನ್ನ ಪಾಳಿ ಪದ್ಧತಿಯಲ್ಲಿ ಪ್ರಾರಂಭಿಸಬೇಕು. ಕಾಲ ಕಾಲಕ್ಕೆ ಅಗತ್ಯಕ್ಕೆ ತಕ್ಕಂತೆ ಮಾರ್ಗಸೂಚಿಗಳನ್ನ ಬದಲಾಯಿಸಿಕೊಂಡು ಶಾಲೆಗಳನ್ನ ನಿರ್ವಹಿಸಬೇಕು.4) ಮಕ್ಕಳೀಗೆ ಮಾನಸಿಕ ಸ್ಥೈರ್ಯ ತುಂಬುವಂಥ ಆಪ್ತಸಮಾಲೋಚಕರನ್ನ ನೇಮಿಸಬೇಕು.
ಶಾಲೆಗಳನ್ನ ಆರಂಭಿಸುವ ಮುನ್ನ ಕೈಗೊಳ್ಳಬೇಕಾದ ಪೂರ್ವ ಸಿದ್ಧತೆಗಳು:
1) ಪೋಷಕರೊಂದಿಗೆ ಹಾಗೂ ಎಸ್ಡಿಎಂಸಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಬೇಕು
2) ಎಸ್ಡಿಎಂಸಿ ಮತ್ತು ಗ್ರಾಮ ಪಂಚಾಯತ್ಗಳ ಸಹಕಾರದಿಂದ ಎಲ್ಲಾ ಶಾಲೆಗಳ ಕೊಠಡಿಗಳನ್ನ ಹಾಗೂ ಪೀಠೋಪಕರಣಗಳನ್ನ ಸ್ವಚ್ಛಗೊಳಿಸಬೇಕು, ಕಡ್ಡಾಯವಾಗಿ ಸ್ಯಾನಿಟೈಸ್ ಮಾಡಬೇಕು.
3) ಶಾಲೆಯಲ್ಲಿರುವ ಎಲ್ಲಾ ಶೌಚಾಲಯಗಳು, ನೀರಿನ ತೊಟ್ಟಿ ಮತ್ತು ವಾಷ್ ಬೇಸಿನ್ಗಳನ್ನ ಸ್ವಚ್ಛಗೊಳಿಸಬೇಕು.
4) ಎಲ್ಲಾ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳಾದ ನೀರು, ಶೌಚಾಲಯ ಮೊದಲಾದ ವ್ಯವಸ್ಥೆ ಇರಬೇಕು. ಮಕ್ಕಳಿಗೆ ಕೈ ತೊಳೆಯಲು ಅಗತ್ಯ ಸಾಬೂನು ಮತ್ತಿತರ ಸೌಲಭ್ಯ ಇರಬೇಕು.
5) ಮಾಸ್ಕ್, ದೈಹಿಕ ಅಂತರ ಪಾಲನೆಯಾಗುವಂತೆ ಎಚ್ಚರ ವಹಿಸಬೇಕು.
ಮಕ್ಕಳಿಗೆ ಒದಗಿಸಬೇಕಾದ ಅವಶ್ಯಕತೆಗಳು:
1) ಮಕ್ಕಳಿಗೆ ಶಾಲೆಯಲ್ಲಿ ಬೆಳಗಿನ ಬಿಸಿ ಹಾಲು, ಮಧ್ಯಾಹ್ನದ ಪೌಷ್ಠಿಕಯುಕ್ತ ಬಿಸಿಯೂಟ ಒದಗಿಸಬೇಕು. ಆಹಾರದ ಜೊತೆ ರೋಗ ನಿರೋಧ ಮಾತ್ರೆಗಳನ್ನ ನೀಡಬೇಕು.
2) ಮಕ್ಕಳ ಆರೋಗ್ಯ ಪರೀಕ್ಷೆ ನಿಯಮಿತವಾಗಿ ಮಾಡಬೇಕು.
3) ಮಕ್ಕಳ ಶೂ, ಶಾಲಾ ಬ್ಯಾಗ್ಗಳನ್ನ ಇಡಲು ಒಂದು ಪ್ರತ್ಯೇಕ ಸ್ಥಳದ ವ್ಯವಸ್ಥೆ ಮಾಡಬೇಕು.
ಶಿಕ್ಷಕರ ಕರ್ತವ್ಯ ಮತ್ತು ಜವಾಬ್ದಾರಿಗಳು: ಶಿಕ್ಷಕರು ಕಡ್ಡಾಯವಾಗಿ ಕೋವಿಡ್ ಪರೀಕ್ಷೆಗೆ ಒಳಗಪಡಬೇಕು. ಶಾಲೆಗೆ ಆಗಮಿಸುವ ಯಾವುದೇ ವ್ಯಕ್ತಿ ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳುವಂತೆ ನೋಡಿಕೊಳ್ಳಬೇಕು. ಗುಂಪು ಚಟುವಟಿಕೆ ವೇಳೆ ಸಾಮಾಜಿಕ ಅಂತರ ಪಾಲಿಸಬೇಕು.
ಮಧ್ಯಾಹ್ನದ ಬಿಸಿಯೂಟ ನಿರ್ವಹಣೆ: ಬಿಸಿಯೂಟಕ್ಕಾಗಿ ಇರುವ ಅಡುಗೆ ಕೋಣೆ ಸ್ವಚ್ಛ ಮಾಡಬೇಕು. ಅಡುಗೆ ಸಾಮಗ್ರಿಗಳನ್ನ ಸ್ವಚ್ಛವಾಗಿಟ್ಟುಕೊಳ್ಳಬೇಕು. ಅಡುಗೆ ಮಾಡುವ ಸಿಬ್ಬಂದಿ ಕೋವಿಡ್ ಪರೀಕ್ಷೆಗೆ ಒಳಪಡಬೇಕು, ಕಡ್ಡಾಯವಾಗಿ ಮಾಸ್ಕ್, ಗ್ಲೌಸ್ ಧರಿಸಬೇಕು. ಆಗಾಗ ಸ್ಯಾನಿಟೈಸರ್ನಿಂದ ಕೈ ತೊಳೆದುಕೊಳ್ಳಬೇಕು ಎಂದು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ರಾಜ್ಯ ಶಿಕ್ಷಣ ಇಲಾಖೆಗೆ ಶಿಫಾರಸುಗಳನ್ನ ಮಾಡಿದೆ.
Comments are closed.