ಬೆಂಗಳೂರು: ದಕ್ಷಿಣ ಭಾರತೀಯ ತಿಂಡಿಗಳನ್ನು ದೇಶ ವಿದೇಶಗರೂ ಸವಿಯುವ ಹಲವು ಜನರಿದ್ದು, ಹೆಚ್ಚು ಪ್ರಸಿದ್ದಿಯನ್ನು ಪಡೆದಿವೆ. ಆದರೆ, ಬ್ರಿಟಿಷ್ ಪ್ರೋಫೆಸರ್ ಒಬ್ಬರು ಇಡ್ಲಿ ಕುರಿತು ಟೀಕೆ ಮಾಡಿ ದಕ್ಷಿಣ ಭಾರತೀಯರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಇಡ್ಲಿ ಕುರಿತು ಪ್ರೊಫೆಸರ್ ಪ್ರಪಂಚದ ನಿರಸದಾಯಕ ವಿಷಯ ಎಂದು ತಮ್ಮ ಟ್ವಿಟರ್ನಲ್ಲಿ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ದಕ್ಷಿಣ ಭಾರತೀಯರ ಕಣ್ಣು ಕೆಂಪು ಮಾಡಿಸಿದೆ. ಅಲ್ಲದೇ ತಮಿಳುನಾಡು, ಕರ್ನಾಟಕ, ಆಂಧ್ರ ಪ್ರದೇಶ , ತೆಲಂಗಾಣದ ‘ಇಡ್ಲಿ; ಪ್ರಿಯರು ಬ್ರಿಟಿಷ್ ಪ್ರೋಫೆಸರ್ ಮೇಲೆ ಮುಗಿಬಿಳುವಂತೆ ಮಾಡಿದೆ. ಅಷ್ಟೇ ಅಲ್ಲದೇ ಜೂಮಾಟೋ ಇಂಡಿಯಾ ಕೂಡ ಇದಕ್ಕೆ ಪ್ರತಿಕ್ರಿಯಿಸಿದ್ದರು. ಜನರು ಹೆಚ್ಚು ಇಷ್ಟ ಪಡುವ ಈ ತಿಂಡಿಯ ರುಚಿ ನಿಮಗಿನ್ನು ಅರ್ಥವಾಗಿಲ್ಲ ಎಂದು ಕುಟುಕಿದೆ.
ಅಲ್ಲದೇ ಕೆಲವು ವಿದೇಶಿಗರು ಕೂಡ ‘ಇಡ್ಲಿ’ ರುಚಿ ಕೊಂಡಾಡಿದ್ದಾರೆ. ಟ್ವೀಟರ್ನಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾಗಿದೆ. ಈ ಕೂಡಲೇ ಎಚ್ಚೆತ್ತ ಪ್ರಧ್ಯಾಪಕ ದಕ್ಷಿಣ ಭಾರತೀಯರೆಲ್ಲಾರು ಒಟ್ಟಾಗಿ ನನ್ನ ಮೇಲೆ ದಾಳಿ ಮಾಡುವ ಮೊದಲು ಒಂದು ನನಗೆ ‘ದೋಸೆ’ ಇಷ್ಟ ಎಂಬುದನ್ನು ತಿಳಿಯಿರಿ ಎಂದಿದ್ದಾರೆ. ದಕ್ಷಿಣ ಭಾರತದ ದೋಸೆ ಮತ್ತು ಅಪ್ಪಂ ಎಂದರೆ ನನಗೆ ಬಲು ಇಷ್ಟ ಆದರೆ ‘ಇಡ್ಲಿ’ ಸಹಿಸಲು ಅಸಾಧ್ಯ ಎಂದಿದ್ದಾರೆ.
Comments are closed.