ಕರ್ನಾಟಕ

ರಾಜ್ಯದಲ್ಲಿ ಬಿ.ಎಸ್.ವೈ ನೇತೃತ್ವದ ಸರಕಾರ ಶೀಘ್ರವೇ ಪತನ: ಟಿ.ಬಿ. ಜಯಚಂದ್ರ

Pinterest LinkedIn Tumblr

ಶಿರಾ: ರಾಜ್ಯದಲ್ಲಿರುವ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಪತನಗೊಳ್ಳಲಿದೆ. ಶೀಘ್ರವೇ ಮಧ್ಯಂತರ ಚುನಾವಣೆ ಎದುರಾಗಲಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ. ಜಯಚಂದ್ರ ಹೇಳಿದ್ದಾರೆ.

ಶಿರಾ ಉಪ ಚುನಾವಣೆ ಪ್ರಚಾರದಲ್ಲಿ ಮಾತನಾಡಿದ ಜಯಚಂದ್ರ ಅವರು, ತಮ್ಮ 50 ವರ್ಷದ ರಾಜಕೀಯ ಜೀವನದಲ್ಲಿ ಎರಡು ಬಾರಿ ಮಧ್ಯಂತರ ಚುನಾವಣೆ ನೋಡಿದ್ದು ಶೀಘ್ರದಲ್ಲೇ ಯಡಿಯೂರಪ್ಪ ಸರ್ಕಾರ ಪತನಗೊಳ್ಳುವುದು ಖಚಿತ ಎಂದಿದ್ದಾರೆ.

ಯಡಿಯೂರಪ್ಪ ಸರ್ಕಾರ ಅವಧಿಯನ್ನು ಪೂರ್ಣಗೊಳಿಸುವುದಿಲ್ಲ, ಸರ್ಕಾರಗಳು ಅಲುಗಾಡಿದಾಗ ಮಧ್ಯಂತರ ಚುನಾವಣೆ ಎದುರಾಗುತ್ತವೆ ಎಂದು ಹೇಳಿದ್ದಾರೆ. 1985 ಮತ್ತು 2008 ರಲ್ಲಿ ಮೈತ್ರಿ ಸರ್ಕಾರಗಳು ಪತನಗೊಂಡಾಗ ಮಧ್ಯಂತರ ಚುನಾವಣೆ ಎದುರಾಗಿತ್ತು ಎಂದು ಅವರು ಸಾರ್ವಜನಿಕ ಸಭೆಯಲ್ಲಿ ನೆನಪಿಸಿಕೊಂಡಿದ್ದಾರೆ.

Comments are closed.