ಚಿಕ್ಕಬಳ್ಳಾಪುರ: ಅತ್ಯಾ#ಚಾರಕ್ಕೆ ಯತ್ನಿಸಿದ ವ್ಯಕ್ತಿಯೋರ್ವ ಆಕೆಯನ್ನು ಕತ್ತು ಹಿಸುಕಿ ಕೊಂದು, ಶವದೊಂದಿಗೆ ಸೆ#ಕ್ಸ್ ನಡೆಸಿದ್ದು, ಕೊನೆಗೂ ಪೋಲೀಸರ ಬಲೆಗೆ ಬಿದ್ದಿದ್ದಾನೆ.
ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಕೋನಾಪುರ ಗ್ರಾಮದ 27 ವರ್ಷದ ಗೃಹಿಣಿ ಶೋಭಾ ಕೊಲೆಗೀಡಾದ ಮಹಿಳೆಯಾಗಿದ್ದು, ಕೆ.ಎನ್. ಶಂಕರಪ್ಪ ಎಂಬಾತನೇ ಕೊಲೆಗೈದ ಆರೋಪಿಯಾಗಿದ್ದಾನೆ.
ಶೋಭಾ ತನ್ನ ಸ್ವಂತ ಜಮೀನಿನಲ್ಲಿ ಕಡಲೇಕಾಯಿ ಬಿಡಿಸುತ್ತಿದ್ದಳು. ಇದೇ ಸಂದರ್ಭಕ್ಕೆ ಹೊಂಚು ಹಾಕಿ ಕಾಯುತ್ತಿದ್ದ ಕೆ.ಎನ್. ಶಂಕರಪ್ಪ, ಜಮೀನಿನಲ್ಲಿದ್ದ ಒಂಟಿ ಮಹಿಳೆ ಬಳಿ ಬಂದು, ಪರಿಚಯದ ನೆಪದಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.
ಆಗ ಶೋಭಾ ವಿರೋಧ ವ್ಯಕ್ತಪಡಿಸಿದ್ದ ಕಾರಣ ಆಕೆಯ ಕತ್ತು ಹಿಸುಕಿ ಕೊಂದು ಶವದ ಮೇಲೆ ಅತ್ಯಾ#ಚಾರವೆಸಗಿ ವಿಕೃತ ಕಾಮ ಮೆರೆದಿದ್ದ. ಕೊಲೆ ನಡೆದು ಬರೋಬ್ಬರಿ 1 ತಿಂಗಳಲ್ಲಿ ಬಟ್ಲಹಳ್ಳಿ ಠಾಣೆ ಪೊಲೀಸರು ಆರೋಪಿಯನ್ನ ಬಂಧಿಸಿ ಬೆಂಡೆತ್ತಿದ್ದಾರೆ.
ಅಸಲಿಗೆ ಬಂಧಿತ ಆರೋಪಿ ಕೆ.ಎನ್. ಶಂಕರಪ್ಪ, ಆಂಧ್ರದ ಎದ್ದುಲೋಳ್ಳಪಲ್ಲಿ ನಿವಾಸಿ. ಸ್ನೇಹಿತನ ಮನೆಗೆ ಅಂತ ಕರ್ನಾಟಕ ಕೋನಾಪುರ ಗ್ರಾಮಕ್ಕೆ ಬಂದಿದ್ದ, ಕೂಲಿ ಮಾಡಿಕೊಂಡು ಇಲ್ಲೆ ಇರ್ತೀನಿ ಅಂತ ಹೇಳಿದ್ದ. ಆದ್ರೆ ಕೂಲಿ ಕೆಲ್ಸಕ್ಕೆ ಹೋಗೋದ್ರ ಬದಲು ಕೆಲಸದಲ್ಲಿ ನಿರತವಾಗಿದ್ದ ಮಹಿಳೆಯ ಮೇಲೆ ಅತ್ಯಾಚಾರ ಎಸಗಲು ಹೋಗಿ ಕೊನೆಗೆ ಆಕೆಯನ್ನು ಕೊಂದು ಆಕೆಯ ಶವದ ಮೇಲೆ ಅತ್ಯಾಚಾರವೆಸಗಿ ವಿಕೃತಿ ಮೆರೆದಿದ್ದಾನೆ.
ಒಟ್ನಲ್ಲಿ ಆಂಧ್ರ ಮೂಲದ ಆರೋಪಿ ಶಂಕರಪ್ಪ, ಮೊದ್ಲೇ ಕಳೆದ 2 ವರ್ಷಗಳ ಹಿಂದೆ ಹೆಂಡತಿಯನ್ನ ತೊರೆದು ಅಲ್ಲಿ ಇಲ್ಲಿ ಓಡಾಡಿಕೊಂಡಿದ್ದ. ಪಾಪಿಯ ವಿಕೃತಿಯನ್ನ ಕೇಳಿ ಸ್ವತಃ ಪೊಲೀಸರೇ ದಂಗಾಗಿದ್ದಾರೆ. ಈ ರೀತಿ ಎಲ್ಲಾದ್ರೂ ಮಾಡಿದ್ದಾನಾ ಅನ್ನೋದ್ರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Comments are closed.