ಕರ್ನಾಟಕ

ತುರ್ತು ಗರ್ಭನಿರೋಧಕ ಮಾತ್ರೆ ಸೇವನೆ ಕುರಿತು ವೈದ್ಯರ ಹೇಳುವುದೇನು ಗೊತ್ತಾ? ಸೇವನೆ ಮಾಡಿದ ಮಹಿಳೆಯರು ವೈದ್ಯರಲ್ಲಿ ಹೇಳುತ್ತಿರುವುದೇನು?

Pinterest LinkedIn Tumblr


ಬೆಂಗಳೂರು: ಮಹಿಳೆಯರು ಗರ್ಭನಿರೋಧಕ ಮಾತ್ರೆಗಳನ್ನು ಅಧಿಕ ಸೇವನೆ ಮಾಡುತ್ತಿರುವ ಕಾರಣ ಅಡ್ಡ ಪರಿಣಾಮಗಳಾಗುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ವೈದ್ಯರು ಎಚ್ಚರಿಸಿದ್ದಾರೆ.

ತುರ್ತು ಗರ್ಭನಿರೋಧಕ ಮಾತ್ರೆಗಳನ್ನು ಹೆಚ್ಚಾಗಿ ಸೇವನೆ ಮಾಡಿದ ಪರಿಣಾಮ ಅಡ್ಡ ಪರಿಣಾಮಗಳನ್ನು ಎದುರಿಸುತ್ತಿದ್ದೇವೆಂದು ಹೇಳಿ ತಿಂಗಳಿಗೆ ಸುಮಾರು 10-15 ಮಹಿಳೆಯರು ಆಸ್ಪತ್ರೆಗೆ ಬರುತ್ತಿದ್ದಾರಂದು ನಗರದ ಫೋರ್ಟಿಸ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ತುರ್ತು ಗರ್ಭನಿರೋಧಕ ಮಾತ್ರೆಗಳು ಹೆಚ್ಚಿನ ಡೋಸ್ ಹೊಂದಿರುತ್ತವೆ. ಇದರ ಪರಿಣಾಮ ಮಾತ್ರೆಗಳನ್ನು ಹೆಚ್ಚಾಗಿ ಸೇವನೆ ಮಾಡುವುದರಿಂದ ವಾಕರಿಕೆ, ವಾಂತಿ ಮತ್ತು ಅನಿಯಮಿತ ರಕ್ತಸ್ರಾವದಂತಹ ಅಡ್ಡಪರಿಣಾಮಗಳು ಎದುರಾಗುತ್ತವೆ.

ಸಾಕಷ್ಟು ಮಹಿಳೆಯರು ಇಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮಾತ್ರೆಗಳನ್ನು ಹೆಚ್ಚಾಗಿ ಸೇವನೆ ಮಾಡುವುದರಿಂದ ಹಾರ್ಮೋನುಗಳ ಅಸಮತೋಲನ ಉಂಟಾಗುತ್ತದೆ ಎಂದು ಫೋರ್ಟಿಸ್ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ಸಲಹಾ ವೈದ್ಯೆ ಪರಿಮಳಾ ದೇವಿಯವರು ಹೇಳಿದ್ದಾರೆ.

 

ದಿನಿನಿತ್ಯದಲ್ಲಿ ಅಂದರೆ 21 ದಿನಗಳ ಮಟ್ಟಿಗೆ ತೆಗೆದುಕೊಳ್ಳುವ ಮಾತ್ರೆಗಳು ಅಷ್ಟಾಗಿ ಪರಿಣಾಮವನ್ನು ಹೊಂದಿರುವುದಿಲ್ಲ. ಆದರೆ, ತುರ್ತು ಗರ್ಭನಿರೋಧಕ ಮಾತ್ರೆಗಳು ಹೆಚ್ಚು ಪರಿಣಾಮಕಾರಿಯಾಗಿರುವುದರಿಂದ ಇದರಿಂದ ಹಾರ್ಮೋನ್’ಗಳ ಸಮಸ್ಯೆ ಸೇರಿದಂತೆ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

Comments are closed.