ಕರ್ನಾಟಕ

ಮತದಾನ ನಡೆದ ದಿನದಂದೇ ಹೃದಯಾಘಾತದಿಂದ ಸಾವನ್ನಪ್ಪಿದ್ದರೂ ಜಯಿಸಿದ ಅಭ್ಯರ್ಥಿ!

Pinterest LinkedIn Tumblr


ದಾವಣಗೆರೆ: ಗ್ರಾಮ ಪಂಚಾಯತ್ ಚುನಾವಣೆಯ ಮತದಾನದ ದಿನವೇ ಸಾವನ್ನಪ್ಪಿದ ಅಭ್ಯರ್ಥಿಯೊಬ್ಬರು ಜಯಗಳಿಸಿದ ಘಟನೆ ಹೊನ್ನಾಳಿ ತಾಲ್ಲೂಕಿನ ಅರಬಗಟ್ಟೆ ಗ್ರಾಮಪಂಚಾಯಿತಿಯ ಸುಂಕದಕಟ್ಟೆ ಗ್ರಾಮದಲ್ಲಿ ನಡೆದಿದೆ.

ಚುನಾವಣೆಗೆ ಸ್ಪರ್ಧಿಸಿದ್ದ ಬಸಪ್ಪ ಮತದಾನದ ದಿನ ಹೃದಯಾಘಾತದಿಂದ ಮೃತಪಟ್ಟಿದ್ದರು. ಆದರೆ ಇಂದು ನಡೆದ ಮತ ಎಣಿಕೆ ಪ್ರಕ್ರಿಯೆಯಲ್ಲಿ ಬಸಪ್ಪ ವಿಜಯಿ ಎಂದು ಘೋಷಿಸಲಾಗಿದೆ.

ಇದುವರೆಗೆ ಐದು ಬಾರಿ ಗೆಲವು ಕಂಡಿದ್ದ ಅವರು ಈ ಬಾರಿಯೂ ಜಯ ಸಾಧಿಸಿದ್ದಾರೆ. ಆದರೆ ಜಯವನ್ನು ಕಾಣಲು ಅವರೇ ಬದುಕುಳಿದಿಲ್ಲ ಎನ್ನುವುದು ಮಾತ್ರ ದುರಂತ.

Comments are closed.