ಮಂಡ್ಯ: ಹಾಡಹಗಲೇ ಯುವ ಜೋಡಿಯೊಂದು ಬಸ್ ನಿಲ್ದಾಣದಲ್ಲಿ ಚುಂಬಿಸಿಕೊಂಡ ಅತಿರೇಕದ ಘಟನೆ ಮಂಡ್ಯದ ಕೆ.ಆರ್ ಪೇಟೆ ಬಸ್ ನಿಲ್ದಾಣದಲ್ಲಿ ನಡೆದಿದೆ. ಇಲ್ಲಿನ ಕೆ.ಆರ್ ಪೇಟೆ ಬಸ್ ನಿಲ್ದಾಣದಲ್ಲಿ ನಿಂತಿದ್ದ ಯುವ ಜೋಡಿ ಮಾತನಾಡುತ್ತ ಏಕಾಏಕಿ ಪರಸ್ಪರ ಮುತ್ತಿಕ್ಕಲು ಶುರು ಮಾಡಿದರು.
ಸಾರ್ವಜನಿಕರು ಅಕ್ಕಪಕ್ಕ ಓಡಾಡುತ್ತಿದ್ದರೂ ಕೂಡ ಇದರ ಅರಿವಿಲ್ಲದಂತೆ ಪರಸ್ಪರ ಕಿಸ್ ಮಾಡುತ್ತಿದ್ದರು. ಇನ್ನು ಬಸ್ ಗಾಗಿ ಕಾಯುತ್ತಿದ್ದ ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್ ನಲ್ಲಿ ಮುತ್ತಿಕ್ಕುವ ದೃಶ್ಯವನ್ನು ಚಿತ್ರೀಕರಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಸಾರ್ವಜನಿಕವಾಗಿ ಕಿಸ್ ಮಾಡುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರು ಇವರಿಬ್ಬರ ಅಶ್ಲೀಲ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Comments are closed.