ಮಡಿಕೇರಿ: ಹೆತ್ತ ಮಗನನ್ನೇ ಕೊಲೆ ಮಾಡಿ, ತೆಂಗಿನ ಮರದಿಂದ ಜಾರಿ ಬಿದ್ದು ಮೃತಪಟ್ಟ ಎಂದು ಹೇಳಿ ತನಿಖೆಯ ಹಾದಿ ತಪ್ಪಿಸಿದ್ದ ತಂದೆಯನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಪುತ್ರ ಮರದಿಂದ ಜಾರಿಬಿದ್ದು ಮೃತಪಟ್ಟಿದ್ದಾನೆ ಎಂದು ದೂರು ನೀಡಿದ್ದ ಮಹೇಂದ್ರ ಕುಮಾರ್ ನನ್ನು ಶನಿವಾರಸಂತೆ ಪೊಲೀಸರು ಬಂಧಿಸಿದ್ದಾರೆ.
ಮಡಿಕೇರಿ ಕೆಎಸ್‌ಆರ್‌ಟಿಸಿಯಲ್ಲಿ ನಿರ್ವಾಹಕರಾಗಿರುವ ಆರೋಪಿ ಮಹೇಂದ್ರ ಕುಮಾರ್ ಫೆಬ್ರವರಿ 1ರಂದು ಪುತ್ರ ಏಕಾಂತಾಚಾರಿ(21) ತೋಟದಲ್ಲಿ ಮರದಿಂದ ಬಿದ್ದು ಮೃತಪಟ್ಟಿದ್ದಾನೆ ಎಂದು ದೂರು ನೀಡಿದ್ದರು.
ಈ ಸಂಬಂಧ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಶವ ಪರೀಕ್ಷೆ ಸಂದರ್ಭದಲ್ಲಿ ಹಲ್ಲೆ ನಡೆಸಿದ ಗುರುತು ಪತ್ತೆಯಾಗಿತ್ತು. ಈ ಬಗ್ಗೆ ತನಿಖೆ ನಡೆಸಿದಾಗ ಆರೋಪಿ ಮಹೇಂದ್ರ ಕುಮಾರ್, ಪುತ್ರನನ್ನು ತೋಟಕ್ಕೆ ಕರೆದೊಯ್ದು ಕೊಲೆ ಮಾಡಿದ್ದಾನೆ ಎಂಬುದು ಗೊತ್ತಾಗಿದೆ.
ಕೊಲೆಯಾದ ಏಕಂತಾಚಾರಿ ಮಾನಸಿಕ ಅಸ್ವಸ್ಥನಾಗಿದ್ದ ಎನ್ನಲಾಗಿದ್ದು, ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವುದು ತನಿಖೆಯಿಂದ ತಿಳಿದುಬಂದಿದೆ.
ಹೆಚ್ಚಿನ ವಿಚಾರಣೆಗಾಗಿ ಆರೋಪಿ ತಂದೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
Comments are closed.