ಬೆಂಗಳೂರು: ಕೊರೋನಾ ಭೀತಿ ನಡುವೆ ಚಿತ್ರಮಂದಿರಗಳಲ್ಲಿ ಏಪ್ರಿಲ್ 7ರವರೆಗೆ ಶೇಕಡ 100ರಷ್ಟು ಆಸನ ವ್ಯವಸ್ಥೆಗೆ ಸರ್ಕಾರ ಅಸ್ತು ಎಂದ ಬೆನ್ನಲ್ಲೆ ‘ಯುವರತ್ನ’ ಚಿತ್ರತಂಡ ನಿಟ್ಟುಸಿರುಬಿಟ್ಟಿದೆ.
ಪುನೀತ್ ರಾಜಕುಮಾರ್ ಅಭಿನಯದ ಯುವರತ್ನ ಸಿನೆಮಾ ಬಿಡುಗಡೆಯಾದ ಒಂದೇ ದಿನಕ್ಕೆ ಸರ್ಕಾರ 50% ಅಕ್ಯುಪೆನ್ಸಿ ನಿಯಮ ಮಾಡಿತ್ತು. ಆದರೆ ಸ್ಯಾಂಡಲ್ ವುಡ್ ಸರ್ವರ ಹೋರಾಟದ ಫಲವಾಗಿ ಹಾಗೂ ಚಿತ್ರತಂಡದ ಒಕ್ಕೋರಲ ಮನವಿಗೆ ಸರಕಾರ ಸ್ಪಂದಿಸಿತ್ತು.
ಸದ್ಯ ‘ಯುವರತ್ನ’ ಚಿತ್ರತಂಡದ ಮೂವರು ಮಂತ್ರಾಲಯದ ರಾಯರ ದರ್ಶನಕ್ಕೆ ತೆರಳಿದ್ದಾರೆ. ಇಂದು ಬೆಳಗ್ಗೆ ನಟ ಪುನೀತ್ ರಾಜ್ಕುಮಾರ್, ನಿರ್ದೇಶಕ ಸಂತೋಷ್ ಆನಂದ್ರಾಮ್ ಹಾಗೂ ಹೊಂಬಾಳೆ ಫಿಲಂಸ್ ಕಾರ್ಯಾಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಮಂತ್ರಾಲಯದತ್ತ ಪ್ರಯಾಣ ಬೆಳೆಸಿದ್ದಾರೆ.
ಅಲ್ಲದೆ ನವರಸನಾಯಕ ಜಗ್ಗೇಶ್ ಕೂಡ ಬೃಂದಾವನದ ದರ್ಶನಕ್ಕೆ ಪುನೀತ್ಗೆ ಸಾಥ್ ನೀಡಿದ್ದಾರೆ. ಹೌದು.. ಚಿತ್ರಮಂದಿರಗಳಿಗೆ ಹೇರಲಾಗಿದ್ದ ರೂಲ್ಸ್ ವಿಚಾರವಾಗಿ ‘ಯುವರತ್ನ’ ಸಿನಿಮಾದ ಜೊತೆ ನಿಂತಿದ್ದ ಜಗ್ಗೇಶ್, ಇದೀಗ ‘ಯುವರತ್ನ’ ತಂಡದ ಜೊತೆ ಮಂತ್ರಾಲಯಕ್ಕೆ ಪ್ರಯಾಣ ಬೆಳೆಸಿದ್ದು ಪುನೀತ್ ಜೊತೆ ಹೊರಟಿರುವ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
‘ಮಂತ್ರಾಲಯ ರಾಯರ ಬೃಂದಾವನದ ದರ್ಶನಕ್ಕೆ ಸಹೋದರ ಪುನೀತ, ಸಂತೋಷ ಆನಂದರಾಮ, ಕಾರ್ತಿಕ್ ಜೊತೆ ಹೊರಟೆ.. ಶುಭದಿನ ಶುಭೋದಯ’ ಅಂತ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.
Comments are closed.