ಕರ್ನಾಟಕ

ಮೈಸೂರಿನಲ್ಲಿ ವಿದ್ಯಾರ್ಥಿನಿಯ ಸಾಮೂಹಿಕ‌‌ ಅತ್ಯಾಚಾರ: ನಾಲ್ವರು ಇಂಜಿನಿಯರಿಂಗ್ ವಿದ್ಯಾರ್ಥಿಗಳ ಬಂಧನ..?

Pinterest LinkedIn Tumblr

ಮೈಸೂರು: ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ತಂಡಕ್ಕೆ ಸಿಕ್ಕ ಮಹತ್ವದ ಸುಳಿವುಗಳ ಹಿನ್ನೆಲೆ‌ ಹೊರ ರಾಜ್ಯದ ನಾಲ್ವರು ಇಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದ ಬಗ್ಗೆ ಮಾಹಿತಿ ಸಿಕ್ಕಿದೆ.

ಪ್ರಕರಣ ಸಂಬಂಧ ಶೋಧಕಾರ್ಯ ಮುಂದುವರೆಸಿರುವ ಪೊಲೀಸರಿಗೆ, ತಮಿಳುನಾಡು ಹಾಗೂ ಕೇರಳ ರಾಜ್ಯಗಳ ನಾಲ್ವರು ಇಂಜಿನಿಯರ್’ಗಳ ಮೇಲೆ ಶಂಕೆ ವ್ಯಕ್ತವಾಗಿದ್ದು ಸದ್ಯ ಅವರನ್ನು ವಶಕ್ಕೆ ಪಡೆಯಲಾಗಿದೆ ಎನ್ನಲಾಗಿದೆ.

ಆಗಸ್ಟ್ 24ರಂದು ರಾತ್ರಿ 7 ಗಂಟೆ ಸುಮಾರಿಗೆ ಗ್ಯಾಂಗ್‌ರೇಪ್ ಪ್ರಕರಣ ನಡೆದಿದ್ದು, ಅಂದು ಆರೋಪಿಗಳು ಮೈಸೂರಿನಲ್ಲೇ ವಾಸ್ತವ್ಯ ಹೂಡಿದ್ದರು. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಆರೋಪಿಗಳು ಪರಾರಿಯಾಗಿದ್ದರು ಮಾತ್ರವಲ್ಲ ಪರೀಕ್ಷೆಗೆ ಕೂಡ ಗೈರಾಗಿದ್ದರು. ನಾಲ್ವರ ಮೊಬೈಲ್ ನೆಟ್ವರ್ಕ್ ಗಳು ಅಪರಾಧ ನಡೆದ ಸಮಯದಲ್ಲಿ ಅವರು ಸ್ಥಳದಲ್ಲಿದ್ದರು ಎಂಬುದನ್ನು ತಿಳಿಸಿವೆ. ಇದೇ ಸಂದರ್ಭದಲ್ಲಿ ಪೊಲೀಸರು ನಾಲ್ವರ ಕಾಲೇಜಿನಲ್ಲಿ ಪರಿಶೀಲನೆ ನಡೆಸಿದ್ದು, ಘಟನೆ ನಡೆದ ದಿನ ನಾಲ್ವರೂ ಪರೀಕ್ಷೆಗೆ ಗೈರಾಗಿರುವುದು ತಿಳಿದುಬಂದಿದೆ. ಇದೆಲ್ಲದ ಆಧಾರದ ಮೇಲೆ‌ ಪೊಲೀಸ್ ತನಿಖೆ ಈ‌ ನಾಲ್ವರತ್ತ ತಿರುಗಿದೆ.

ತನಿಖೆಗೆ ಸಂತ್ರಸ್ತೆಯ ಸಂಪೂರ್ಣ ಸಹಕಾರ ಬೇಕಿದೆ. ಆಕೆ ಆತಂಕದಿಂದ ಹೊರಬಂದ ಬಳಿಕ ತನಿಖೆ ನಡೆಸಲಾಗುತ್ತದೆ ಎಂದು ಡಿಜಿ ಮತ್ತು‌ ಐಜಿಪಿ‌ ಪ್ರವೀಣ್ ಸೂದ್ ಹೇಳಿದ್ದಾರೆ.

Comments are closed.