ಕರ್ನಾಟಕ

ಗ್ಯಾಸ್, ತೈಲ ಬೆಲೆ ಏರಿಕೆಯಾಗಲು ತಾಲಿಬಾನ್‌ ಕಾರಣ: ಬಿಜೆಪಿ ಶಾಸಕ ಅರವಿಂದ್‌ ಬೆಲ್ಲದ್‌

Pinterest LinkedIn Tumblr

ಧಾರವಾಡ: ತಾಲಿಬಾನ್‌ ಸಮಸ್ಯೆಯ ಕಾರಣದಿಂದ ಅನಿಲ ಬೆಲೆ ಏರಿಕೆಯಾಗಿದೆ ಎಂದು ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ್‌ ಬೆಲ್ಲದ್‌ ಹೇಳಿದ್ದಾರೆ.

ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲಿಬಾನ್‌ ಸಮಸ್ಯೆಯ ಹಿನ್ನೆಲೆ ಅನಿಲ ಬೆಲೆ ಏರಿಕೆಯಾಗಿದೆ. ಕಚ್ಚಾ ತೈಲ ಕೂಡಾ ಬರುತ್ತಿಲ್ಲ. ಹಾಗಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಏಕೆ ಬೆಲೆ ಏರಿಕೆಯಾಗಿದೆ ಹಾಗೂ ಗ್ಯಾಸ್‌ ದರ ಏಕೆ ಹೆಚ್ಚಳವಾಗಿದೆ ಎಂದು ಮತದಾರರೇ ವಿಚಾರ ಮಾಡಿ ಮತ ಹಾಕುತ್ತಾರೆ ಎಂದಿದ್ದಾರೆ.

ಈ ಬಾರಿ ಹುಬ್ಬಳ್ಳಿ, ಧಾರವಾಡ ಚುನಾವಣೆಯಲ್ಲಿ ನಾವೇ ಗೆಲ್ಲುತ್ತೇವೆ. ಅಭಿವೃದ್ದಿಯನ್ನು ಗಮನಿಸಿ ಜನರು ಮತ ಹಾಕುತ್ತಾರೆ. ಪಾಲಿಕೆ ಚುನಾವಣೆಯಲ್ಲಿ ನಾವು 55-60 ಸೀಟು ಗೆಲ್ಲುತ್ತೇವೆ. ಪಾಲಿಕೆಯಲ್ಲಿ ಈ ಬಾರಿ ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತೇವೆ ಎಂದು ತಿಳಿಸಿದ್ದಾರೆ.

Comments are closed.