ಕರ್ನಾಟಕ

ಸಮುದ್ರದ ಬಂಡೆ ಮೇಲೆ ಧ್ಯಾನಕ್ಕೆ ಕೂತಂತೆ ಫೋಟೋಗೆ ಪೋಸ್ ಕೊಡಲು ಹೋಗಿ ನೀರುಪಾಲದ ವ್ಯಕ್ತಿ!

Pinterest LinkedIn Tumblr

ಉತ್ತರಕನ್ನಡ: ಕುಮಟಾದ ವನ್ನಳ್ಳಿರಲ್ಲಿರುವ ಸಮುದ್ರದ ದಡದ ಬಂಡೆ ಮೇಲೆ ಧ್ಯಾನದಲ್ಲಿ ಕುಳಿತಂತೆ ಫೋಟೋಗೆ ಪೋಸ್ ಕೊಡಲು ಹೋಗಿ ಪ್ರವಾಸಿಗನೋರ್ವ ಸಾವನ್ನಪ್ಪಿರುವ ಘಟನೆ ನಡೆದಿದೆ.

ಮೃತಪಟ್ಟ ವ್ಯಕ್ತಿಯನ್ನು ಶಿರಸಿ ನಗರದ ನಿವಾಸಿ ಸುಬ್ಬುಗೌಡ(42) ಎಂದು ಗುರುತಿಸಲಾಗಿದೆ.

ಸ್ನೇಹಿತರ ಜೊತೆಗೆ ಪ್ರವಾಸಿಗರ ಜೊತೆಗೆ ಬಂದಿದ್ದ ಸುಬ್ಬುಗೌಡ, ಕಡಲತೀರದ ಬಂಡೆ ಮೇಲೆ ಕುಳಿತು ಫೋಟೋಗೆ ಪೋಸ್ ಕೊಡುತ್ತಿದ್ದ ಈ ವೇಳೆ ಅಪ್ಪಳಿಸಿದ ಬೃಹತ್ ಗಾತ್ರದ ಅಲೆಗೆ ಸಿಲುಕಿ ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಘಟನೆ ಕುರಿತು ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Comments are closed.