ಕರ್ನಾಟಕ

ಕುತೂಹಲ ಕೆರಳಿಸಿದ್ದ ಹಾನಗಲ್‌, ಸಿಂದಗಿಯಲ್ಲಿ ಇಂದು ಮತದಾನ.!

Pinterest LinkedIn Tumblr

ಬೆಂಗಳೂರು: ಬಾರೀ ಕುತೂಹಲ ಕೆರಸಿರುವ ರಾಜಕೀಯ ಜಿದ್ದಾಜಿದ್ದಿಗೊಳಪಟ್ಟ ಆಡಳಿತ ರೂಢ ಬಿಜೆಪಿ ಮತ್ತು ವಿಪಕ್ಷಗಳಾದ ಕಾಂಗ್ರೆಸ್‌-ಜೆಡಿಎಸ್‌ಗಳಿಗೆ ಪ್ರತಿಷ್ಠೆ ಯಾಗಿರುವ ಸಿಂದಗಿ ಮತ್ತು ಹಾನಗಲ್‌ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಶನಿವಾರ ಮತದಾನ ನಡೆಯಲಿದೆ.

ಬೆಳಗ್ಗೆ 7ರಿಂದ ಸಂಜೆ 7ರ ವರೆಗೆ ಮತದಾನ ನಡೆಯಲಿದ್ದು, ಎರಡೂ ಕ್ಷೇತ್ರ ಗಳಲ್ಲಿ ಕಣದಲ್ಲಿರುವ 19 ಅಭ್ಯರ್ಥಿಗಳ ಭವಿಷ್ಯವನ್ನು 4.38 ಲಕ್ಷ ಮತದಾರರು ನಿರ್ಧರಿಸಲಿದ್ದಾರೆ. ನ. 2ರಂದು ಮತ ಎಣಿಕೆ ನಡೆಯಲಿದೆ.

ಸಿಂದಗಿಯಲ್ಲಿ 6 ಮಂದಿ ಕಣದಲ್ಲಿದ್ದು, 2.34 ಲಕ್ಷ ಮತದಾರರಿದ್ದಾರೆ. ಹಾನಗಲ್‌ ಕ್ಷೇತ್ರದಲ್ಲಿ 13 ಮಂದಿ ಕಣದಲ್ಲಿದ್ದು, 2.04 ಲಕ್ಷ ಮತದಾರರಿದ್ದಾರೆ. ಎರಡೂ ಕ್ಷೇತ್ರಗಳ 560 ಮತಗಟ್ಟೆಗಳ ಪೈಕಿ 99 ಸೂಕ್ಷ್ಮ ಎಂದು ಗುರುತಿಸಲಾಗಿದೆ. 60 ಮಂದಿ ಮೈಕ್ರೋ ಅಬ್ಸರ್ವರ್‌ಗಳನ್ನು ನೇಮಕ ಮಾಡಲಾಗಿದೆ.

Comments are closed.