ಮಂಗಳೂರು ಮೇ 08 : ಭಾರತೀಯ ವೈದ್ಯಕೀಯ ಸಂಘ ಮಂಗಳೂರು ಶಾಖೆ ಹಾಗೂ ರೋಟರೀ ಮಂಗಳೂರು ಸಿಟಿ ಸಂಸ್ಥೆ ಜಂಟಿ ಆಶ್ರಯದಲ್ಲಿ ತಾ. 07.05.2024ರಂದು ನಗರದ ಮರೋಳಿ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿರುವ ಲಿಟ್ಲ್ ಸಿಸ್ರ‍್ಸ್ ಆಫ್ ದಿ ಪೂವರ್ ಹಾಗೂ ಹೋಮ್ ಫಾರ್ ದಿ ಏಜೆಡ್ ಸಂಸ್ಥೆಯ ಸಭಾಂಗಣದಲ್ಲಿ ಸಂಸ್ಥೆಯ ನಿವಾಸಿಗಳಿಗಾಗಿ “ಶ್ರವಣ ಧ್ವನಿ ದೋಷ ನಿವಾರಕ ಯಂತ್ರೋಪಕರಣ” ಉಚಿತವಾಗಿ ದಾನದ ರೂಪದಲ್ಲಿ ನೀಡುವ ಕಾರ್ಯಕ್ರಮ ಜರಗಿತು.
ರೋಟರಿ ಜಿಲ್ಲಾ ಗವರ್ನರಾದ ರೋ| ಹೆಚ್.ಆರ್. ಕೇಶವ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಸಮಾಜದ ಮೂಲಭೂತ ಸೌಲಭ್ಯಗಳಿಗೆ ಸ್ಪಂದಿಸಿ ನಿಸ್ವಾರ್ಥ ಸೇವಾ ಮನೋಭಾವದಿಂದ ಸೇವೆ ನೀಡುವ ರೋಟರೀ ಸಂಸ್ಥೆಯ ಸಮಾಜ ಸೇವೆ ಶ್ಲಾಘನೀಯ ಎಂದು ನುಡಿದು 16 ಹಿರಿಯ ನಿವಾಸಿಗಳಿಗೆ ಶ್ರವಣ ದೋಷ ನಿವಾರಕ ಯಂತ್ರೋಪಕಣವನ್ನು ಹಸ್ತಾಂತರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋಟರಿ ಸಂಸ್ಥೆಯ ಅಧ್ಯಕ್ಷ ರೋ| ಪ್ರಶಾಂತ್ ರೈ ಅವರು ಈ ಉಚಿತ ದಾನದ ರೂಪದ ಕಾರ್ಯಕ್ರಮವು ನಮ್ಮ ಸಂಸ್ಥೆಯ ಸಮಾಜ ಸೇವಾ ಯೋಜನೆಯ ಅಂಗವಾಗಿ ಆಯೋಜಿಸಲಾಗಿದೆ ಎಂದು ನುಡಿದು ಇದರ ಒಟ್ಟು ಮೌಲ್ಯ ಸುಮಾರು 02.00 ಲಕ್ಷ ಎಂದು ಮಾಹಿತಿ ನೀಡಿದರು.
ಲಿಟ್ಲ್ ಸಿಸ್ಟರ್ ಆಫ್ ದಿ ಪೂವರ್ ಸಂಸ್ಥೆಯ ಮುಖ್ಯಸ್ಥೆಯಾದ ಮಾತೆ ಥೋಮಸಿನ್ ಮರಿಯಾ ಸ್ವಾಗತಿಸಿದರು. ಭಾರತೀಯ ವೈದ್ಯಕೀಯ ಸಂಘದ ನಿಯೋಜಿತ ಅಧ್ಯಕ್ಷೆ ಡಾ| ಶ್ರೀಮತಿ ಜೆಸ್ಸಿ ಡಿಸೋಜ ವಂದಿಸಿದರು.
ವೇದಿಕೆಯಲ್ಲಿ ರೋಟರಿ ಜಿಲ್ಲಾ ಸಹಾಯಕ ಗವರ್ನರಾದ ರೋ| ಪಿ.ಡಿ. ಶೆಟ್ಟಿ, ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷರಾದ ಡಾ| ರಂಜನ್, ಕಾರ್ಯದರ್ಶಿಯವರಾದ ಡಾ| ಅವಿನ್ ಆಳ್ವ ಮತ್ತು ರೋಟರಿ ಸಂಸ್ಥೆಯ ಕಾರ್ಯದರ್ಶಿಯಾದ ಗಣೇಶ್‌ರವರು ಉಪಸ್ಥಿತರಿದ್ದರು.
Comments are closed.