ಪಲ್ಘಾಡ್ (ಮಹಾರಾಷ್ಟ್ರ): ಗಂಡು ಮಗು ಬೇಕೆಂಬ ಕಾರಣಕ್ಕೆ ಜನಿಸಿದ್ದ ಒಂದೂವರೆ ತಿಂಗಳ ಮಗಳನ್ನು ತಂದೆಯೊಬ್ಬ ಹತ್ಯೆ ಮಾಡಿರುವ ಧಾರುಣ ಘಟನೆಯೊಂದು ಪಲ್ಘಾಡ್ ನಲ್ಲಿ ನಡೆದಿದೆ.
ಕೈಲಾಸ್ ಬಂಡೆ (30) ಹತ್ಯೆ ಮಾಡಿದ ಕ್ರೂರಿ ತಂದೆ. ಗಂಡು ಮಗುವಿನ ಜನನಕ್ಕಾಗಿ ನಿರೀಕ್ಷೆ ಇಟ್ಟುಕೊಂಡಿದ್ದ ಕೈಲಾಸ್ ಬಂಡೆಗೆ ನಿರಾಶೆಯಾಗಿತ್ತು. ಆತನ ಪತ್ನಿ ಮೇ.15 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಇದರಂತೆ ತೀವ್ರವಾಗಿ ಕೋಪಗೊಂಡಿದ್ದ ಕೈಲಾಸ್ ಕಳೆದೆರಡು ದಿನಗಳ ಹಿಂದೆ ಮಗುವನ್ನು ಸಾಯಿಸಿದ್ದಾರೆ. ಅಲ್ಲದೆ, ದುಃಖ ತಪ್ತಳಾಗಿದ್ದ ಪತ್ನಿಗೆ ಬೆದರಿಸಿ ವಿಚಾರವನ್ನು ಯಾರಿಗೂ ಹೇಳದಂತೆ ತಿಳಿಸಿದ್ದಾನೆ.
ನಂತರ ಯಾರಿಗೂ ಅನುಮಾನ ಬಾರದಂತೆ ಮಗುವಿನ ಸಾವು ಆಕಸ್ಮಿಕವಾದದ್ದು ಎಂದು ಹೇಳಿ. ಏನೂ ತಿಳಿದೇ ಇಲ್ಲ ಎಂಬಂತೆ ಮಗುವಿನ ಅಂತಿಮ ಸಂಸ್ಕಾರವನ್ನು ನಡೆಸಲು ಮುಂದಾಗಿದ್ದಾನೆ. ಸ್ಮಶಾನಕ್ಕೆ ತೆರಳುತ್ತಿದ್ದಂತೆ ದುಃಖ ತಾಳದ ತಾಯಿ ಪತಿ ಮಾಡಿದ ಅಪರಾಧವನ್ನು ಹೇಳಿಕೊಂಡಿದ್ದಾಳೆ. ನಂತರ ಕೈಲಾಸ್ ಬಂಡೆ ತಲೆ ಮರೆಸಿಕೊಂಡಿದ್ದಾನೆ.
ಆರೋಪಿ ಕೈಲಾಸ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದ ಸ್ಥಳೀಯ ಪೊಲೀಸರು, ಬಂಡೆಯನ್ನು ಹುಡುಕುವಲ್ಲಿ ಯಶಸ್ವಿಯಾಗಿದ್ದಾರೆ, ಇದೀಗ ಕೈಲಾಸ್ ಬಂಡೆಯನ್ನು ಬಂಧನಕ್ಕೊಳಪಡಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Comments are closed.