ಮುಂಬಯಿ: ಅತ್ಯಾಚಾರ ಕುರಿತ ತನ್ನ ವಿವಾದಾತ್ಮಕ ಹೇಳಿಕೆಗೆ ಬಾಲಿವುಡ್ ನಟ ಸಲ್ಮಾನ ಖಾನ್ ಕ್ಷಮೆಯಾಚಿಸಿಲ್ಲ ಎಂದು ರಾಷ್ಟ್ರೀಯ ಮಹಿಳಾ ಆಯೋಗ ತಿಳಿಸಿದೆ.
ಅತ್ಯಚಾರ ಹೇಳಿಕೆಗೆ ಸಲ್ಮಾನ್ ಖಾನ್ ಅವರು ಸ್ಪಷ್ಟೀಕರಣ ನೀಡಿ ಕ್ಷಮೆಯಾಚಿಸಬೇಕೆಂದು ಆಯೋಗ ನೊಟೀಸ್ ಜಾರಿ ಮಾಡಿತ್ತು. ಆದರೆ ಈ ನೋಟಿಸ್ ಗೆ ಸಲ್ಮಾನ್ ಉತ್ತರಿಸದೆ ತಮ್ಮ ವಕೀಲರ ಮೂಲಕ ಪ್ರತಿಕ್ರಿಯಿಸಿದ್ದಾರೆ ಹೊರತು ಕ್ಷಮೆಯಾಚಿಸಿಲ್ಲ. ಸಲ್ಮಾನ್ ಅವರ ಈ ನಡವಳಿಕೆ ಸಮಂಜಸವಲ್ಲ. ಹೀಗಾಗಿ ಸ್ವತಃ ಸಲ್ಮಾನ್ ಅವರೇ ನಮ್ಮೊಂದಿಗೆ ಕ್ಷಮೆಯಾಚಿಸಬೇಕು ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಮುಖ್ಯಸ್ಥೆ ಲಲಿತಾ ಕುಮಾರಮಂಗಲಂ ಕಿಡಿಕಾರಿದ್ದಾರೆ.
ಈ ವರ್ಷ ಈದ್ ಗೆ ತೆರೆ ಕಾಣಲಿರುವ ತನ್ನ “ಸುಲ್ತಾನ್’ ಚಿತ್ರದಲ್ಲಿ ಕುಸ್ತಿ ಪಟುವಾಗಿ ನಟಿಸಿರುವ ಸಲ್ಮಾನ್ ಖಾನ್, ಈ ಪಾತ್ರದಲ್ಲಿ ತಾನು ನಟಿಸುವಾಗ ಅನುಭವಿಸಿದ್ದ ದೈಹಿಕ ಯಾತನೆಯನ್ನು ರೇಪಾದ ಮಹಿಳೆಯ ದೈಹಿಕ ನೋವಿಗೆ ಹೋಲಿಸಿ ಹೇಳಿಕೆ ನೀಡಿದ್ದರು. ಆ ಮೂಲಕ ರೇಪಾದ ಮಹಿಳೆಯ ನೋವನ್ನು ಸಲ್ಮಾನ್ ಹಗುರವಾಗಿ ಕಂಡಿರುವುದಾಗಿ ಮಹಿಳಾ ಸಮುದಾಯದಿಂದ ವ್ಯಾಪಕ ಟೀಕೆ, ಖಂಡನೆಗೆ ಗುರಿಯಾಗಿದ್ದರು.
Comments are closed.