ಮುಂಬೈ: ದೇಶದಲ್ಲೆ ಅತೀ ಹೆಚ್ಚು ಸಂಭಾವನೆ ಗಳಿಸುವ ನಟ ಅಮೀರ್ ಖಾನ್ ತಮ್ಮ ಮಗನಿಗೆ ರಂಜಾನ್ ಉಡುಗೊರೆಯಾಗಿ 2 ರೂ ನೀಡಿದ್ದಾರಂತೆ.
ಈದ್ ಹಬ್ಬದ ನಿಮಿತ್ತ ತಮ್ಮ ತಾಯಿಯ ಮನೆಯಲ್ಲಿ ಮಾಧ್ಯಮದವರೊಂದಿಗೆ ಆಮೀರ್ ಖಾನ್ ಮಾತಾನಾಡಿದರು. ಈ ವೇಳೆ ಕುಟುಂಬದ ಸದಸ್ಯರಿಗೆ ಏನು ಉಡುಗೊರೆ ನೀಡಿದ್ದಿರಾ? ಎಂದು ಕೇಳಿದ್ದಕ್ಕೆ ಆಮೀರ್, ತಮ್ಮ ಪತ್ನಿ ಹಾಗೂ ಮಗ ಈಗ ಯುರೋಪ್ ಪ್ರವಾಸದಲ್ಲಿದ್ದಾರೆ. ಮಗ ಅಜದ್ ರಾವ್ಗೆ ಎರಡು ರೂಪಾಯಿ ಉಡುಗೊಗೆ ರೂಪದಲ್ಲಿ ನೀಡಿದ್ದೇನೆ ಎಂದಿದ್ದಾರೆ.
ಎರಡು ರೂಪಾಯಿ ನೀಡಿರುವುದಕ್ಕೆ ಕಾರಣ ತಿಳಿಸಿದ ಆಮೀರ್, ಮಗನಿಗೆ ಅಧಿಕ ಹಣ ನೀಡಿ ಹಾಳಾಗಲು ಬಿಡುವುದಿಲ್ಲ. ನಾನು ಚಿಕ್ಕವನಿರುವಾಗ ಈ ರೀತಿ ಈದ್ ಉಡುಗೊರೆ ಪಡೆಯುತ್ತಿದ್ದೆ. ಆದರೆ ಈ ರೀತಿ ಮಗನಿಗೆ ಹೆಚ್ಚಿನ ಹಣ ನೀಡಲು ನನಗೆ ಇಷ್ಟವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮಗನ ಶಾಲೆಗೆ ರಜೆ ಇರುವುದರಿಂದ ಕಿರಣ್ ರಾವ್ ಮತ್ತು ಅಜದ್ ಯರೋಪ್ ಪ್ರವಾಸಕ್ಕೆ ತೆರಳಿದ್ದಾರೆ. ಕೆಲಸ ನಿಮಿತ್ತ ತಾವು ಪ್ರವಾಸಕ್ಕೆ ತೆರಳಲು ಆಗಲಿಲ್ಲ ಎಂದು ಆಮೀರ್ ಖಾನ್ ಹೇಳಿದ್ದಾರೆ.
Comments are closed.