ಮುಂಬೈ: ಬಾಲಿವುಡ್ನ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ ಸುಲ್ತಾನ್ ಚಿತ್ರ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದು, ಹಲವು ದಾಖಲೆಗಳನ್ನು ಪುಡಿ ಪುಡಿ ಮಾಡಿರುವುದು ಗೊತ್ತಿರುವ ಸಂಗತಿ. ಆದರೆ ಇದೀಗ ಈ ಚಿತ್ರದಲ್ಲಿನ ಸಲ್ಮಾನ್ ಅವರ ಪಾತ್ರದಿಂದ ಉತ್ತೇಜಿತರಾಗಿ ಪ್ರತಿನಿತ್ಯ ಸಲ್ಮಾನ್ ಅವರ ಪೋಟೋಕ್ಕೆ ಪೂಜೆಸಲ್ಲಿಸಿ, ಕುಸ್ತಿ ಅಭ್ಯಾಸ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಹೌದು, ಕುಸ್ತಿ ಪಟುಗಳಿಗೆ ಆಂಜನೇಯ ಆರಾಧ್ಯ ದೇವ. ಆದರೆ ಕಾನ್ಪುರದಲ್ಲಿರುವ ಚಂದು ಅಖಾಡದ ಸದಸ್ಯರಿಗೆ ಸಲ್ಮಾನ್ ಆರಾಧ್ಯ ದೈವ. ಇದಕ್ಕೆ ಕಾರಣ ಸುಲ್ತಾನ್ ಚಿತ್ರದಲ್ಲಿ ಸಲ್ಮಾನ್ ಅವರ ಅಭಿನಯ ಹಾಗೂ ಕುಸ್ತಿಯ ಚಾಕಚಕ್ಯತೆ. ಅಖಾಡದಲ್ಲಿ ಬೃಹದಾಕಾರದ ಸಲ್ಮಾನ್ ಅವರ ಭಾವಚಿತ್ರವನ್ನು ಗೋಡೆಗೆ ಹಾಕಲಾಗಿದೆ. ಈಗಾಗಲೇ ನೂರಕ್ಕೂ ಅಧಿಕ ಯುವಕರು ಈ ಅಖಾಡಕ್ಕೆ ಭೇಟಿ ನೀಡಿ ವಿಚಾರಿಸಿದ್ದಾರೆ. ಅಷ್ಟೇ ಅಲ್ಲ ಐವತ್ತಕ್ಕೂ ಅಧಿಕ ಮಂದಿ ಸೇರ್ಪಡೆಯಾಗಿ ಕುಸ್ತಿ ಕಲೆಯನ್ನು ಕರಗತ ಮಾಡಿಕೊಳ್ಳುತ್ತಿದ್ದಾರೆ.
Comments are closed.