ಮುಂಬೈ

ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಮಹಿಳಾ ವಾರ್ಡನ್ ವಿರುದ್ಧ ಎಫ್‍ಐಆರ್

Pinterest LinkedIn Tumblr

rape-minor

ಮುಂಬೈ: ಕೇವಲ ಮೂರು ವರ್ಷದ ಬಾಲಕಿಗೆ ಲೈಂಗಿಕ ಹಿಂಸೆ ನೀಡಿದ ಆರೋಪದಲ್ಲಿ ಶಾಲೆಯ ಮಹಿಳಾ ವಾರ್ಡನ್ ಒಬ್ಬಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಜು.21 ರಂದು ನಡೆದ ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ತರಗತಿಯಲ್ಲಿ ಮೂರು ವರ್ಷದ ಮಗು ತುಂಬಾ ಡಲ್ ಆಗಿದ್ದುದನ್ನು ಗಮನಿಸಿದ ಶಿಕ್ಷಕ ಮಗುವನ್ನು ಪ್ರಶ್ನಿಸಿದ್ದಾರೆ. ಆದರೆ ಮಗು ಏನೂ ಹೇಳಿಲ್ಲ. ಆಗ ಮಗುವಿನ ಜತೆಯ ಹುಡುಗಿಯೊಬ್ಬಳು ಶಿಕ್ಷಕಿ ಎದುರು ಈ ಬಾಲಕಿ ಹೇಳಿದ್ದನ್ನು ತಿಳಿಸಿದ್ದಾಳೆ.

ಕೂಡಲೇ ಶಿಕ್ಷಕಿ ಪ್ರಿನ್ಸಿಪಾಲ್‍ಗೆ ದೂರು ನೀಡಿದ್ದಾರೆ. ಪೋಷಕರಿಗೂ ವಿಷಯ ತಿಳಿಸಿದ್ದಾರೆ. ಆದರೆ ಮಗುವಿನ ಪೋಷಕರು ಭಯದಿಂದ ದೂರು ನೀಡಲು ಹಿಂದೇಟು ಹಾಕಿದ್ದಾರೆ.

ಕೊನೆಗೆ ಈ ಬಗ್ಗೆ ಮೂರನೆ ವ್ಯಕ್ತಿಯೊಬ್ಬರು ನೀಡಿದ ದೂರನ್ನಾಧರಿಸಿ 52 ವರ್ಷದ ವಾರ್ಡನ್ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ ಎಂದು ಪೋಲೀಸ್ ಅಧಿಕಾರಿ ತಿಳಿಸಿದ್ದಾರೆ. ಇದುವರೆಗೂ ಇನ್ನೂ ವಾರ್ಡನ್ ಬಂಧನವಾಗಿಲ್ಲ.

Comments are closed.