ಅಂತರಾಷ್ಟ್ರೀಯ

ರಿಯೋ ಒಲಿಂಪಿಕ್ಸ್‌ಗೆ ಕೌಂಟ್‌ಡೌನ್ ಶುರು

Pinterest LinkedIn Tumblr

olampyc

ರಿಯೋ ಡಿ ಜೈನೆರೋದಲ್ಲಿ ನಡೆಯಲಿರುವ ಒಲಿಂಪಿಕ್ಸ್‌ಗೆ ಕೌಂಟ್‌ಡೌನ್ ಶುರುವಾಗಿದೆ. ಹೌದು ಇಡೀ ಜಗತ್ತೇ ಎದುರು ನೋಡುತ್ತಿರುವ ರಿಯೋ ಒಲಿಂಪಿಕ್ಸ್‌ಗೆ ಉಳಿದಿರುವುದು ಕೇವಲ ಮೂರು ದಿನಗಳು ಮಾತ್ರ. ಈ ಒಲಿಂಪಿಕ್ಸ್‌ನಲ್ಲಾದರೂ ಹೆಚ್ಚು ಪದಕಗಳನ್ನು ಗೆಲ್ಲುವ ಮೂಲಕ ತಮ್ಮ ದೇಶದ ಕೀರ್ತಿ ಪತಾಕೆ ಹಾರಿಸಬೇಕೆಂಬ ತವಕ ಎಲ್ಲ ರ್ಸ್ಪಗಳಲ್ಲೂ ಎದ್ದು ಕಾಣುತ್ತಿದೆ. ನಮ್ಮ ದೇಶದಿಂದ ಪ್ರತಿನಿಸುತ್ತಿರುವ 119 ಸ್ಪರ್ಧಾಳುಗಳೂ ಕೂಡ ಈ ಬಾರಿ ರಿಯೋ ಒಲಿಂಪಿಕ್ಸ್‌ನಲ್ಲಿ ಹೆಚ್ಚು ಪದಕಗಳನ್ನು ಗೆಲ್ಲುವ ಮೂಲಕ ದೇಶದ ಕೀರ್ತಿಯನ್ನು ಹೆಚ್ಚಿಸಬೇಕೆಂಬ ತವಕದಲ್ಲಿದ್ದಾರೆ. ಇದಕ್ಕಾಗಿಯೇ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿರುವ ಕ್ರೀಡಾಳುಗಳ ಅನುದಾನವನ್ನು ಹೆಚ್ಚಿಸಿರುವುದೇ ಅಲ್ಲದೆ ಈಗಾಗಲೇ ಕ್ರೀಡಾಳುಗಳು ಸಾಕಷ್ಟು ಪೂರ್ವ ತಯಾರಿ ಮಾಡಿಕೊಂಡಿದ್ದು ಈ ಬಾರಿ ಟಾಪ್ 10ನಲ್ಲಿ ಬರುವ ಹುಮ್ಮಸ್ಸನ್ನು ತೋರಿಸಿದ್ದಾರೆ.

ಶೂಟಿಂಗ್‌ನಲ್ಲಿ ಮಿಂಚಲಿರುವ ಅಭಿನವ್ ಬಿಂದ್ರಾ:
2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ 10 ಮೀಟರ್ ಏರ್‌ರೈಫಲ್‌ನಲ್ಲಿ ಚಿನ್ನದ ಪದಕ ಗಳಿಸಿದ್ದ ಶೂಟರ್ ಅಭಿನವ್‌ಬಿಂದ್ರಾ ಈ ಬಾರಿಯ ಒಲಿಂಪಿಕ್ಸ್ ತಮ್ಮ ವೃತ್ತಿ ಜೀವನದ ಕೊನೆಯ ಒಲಿಂಪಿಕ್ಸ್ ಎಂದು ಹೇಳಿಕೊಂಡಿರುವುದರಿಂದ ಈಗ ಎಲ್ಲರ ಚಿತ್ತ ಅವರತ್ತಲೇ ನೆಟ್ಟಿದೆ. 2008ರ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗಳಿಸಿದ್ದ ಅಭಿನವ್ ಬಿಂದ್ರಾ ರಿಯೊ ಒಲಿಂಪಿಕ್ಸ್‌ನಲ್ಲೂ ಚಿನ್ನದ ಪದಕ ಗೆಲ್ಲುವತ್ತ ಗುರಿ ನೆಟ್ಟಿದ್ದರೆ, 2012ರಲ್ಲಿ ಕಂಚಿನ ಪದಕ ವಿಜೇತರಾಗಿದ್ದ ಗಗನ್ ನಾರಂಗ್ ಅವರು ರಿಯೋ ಒಲಿಂಪಿಕ್ಸ್‌ನ ಶೂಟಿಂಗ್ ವಿಭಾಗದಲ್ಲಿ ಗಮನ ಸೆಳೆದಿದ್ದಾರೆ. 2014ರಲ್ಲಿ ಗ್ಲಾಸ್ವೋದಲ್ಲಿ ನಡೆದ ಕಾಮನ್‌ವೆಲ್ತ್‌ನ 10 ಮೀಟರ್ ಏರ್ ರೈಫಲ್‌ನಲ್ಲಿ ಚಿನ್ನ , ಇಂಚೋನ್‌ನಲ್ಲಿ ನಡೆದ ಏಷ್ಯಾಗೇಮ್ಸ್‌ನ 10 ಮೀಟರ್ ಏರ್ ರೈಫಲ್‌ನಲ್ಲಿ ಕಂಚಿನ ಪದಕ ಗೆದ್ದಿರುವ ಬಿಂದ್ರಾರ ಮೇಲೆ ಸಹಜವಾಗಿ ವಿಶ್ವಾಸ ಮೂಡಿದೆ.

ಅಲ್ಲದೆ 29ರ ಹರೆಯದ ರೀತು ರೈ ಕೂಡ ಗಮನ ಸೆಳೆದಿರುವ ಆಟಗಾರ್ತಿ ಆಗಿದ್ದಾರೆ. 50 ಮೀಟರ್ ಹಾಗೂ 10 ಮೀಟರ್ ಶೂಟಿಂಗ್‌ನಲ್ಲಿ ವಿಶ್ವದ 2ನೆ ಆಟಗಾರ್ತಿ ಯಾಗಿರುವ ರೀತು ಹಾಗೂ 2012ರ ವಿಶ್ವಕಪ್‌ನಲ್ಲಿ ಬೆಳ್ಳಿ ಪದಕ ವಿಜೇತರಾದ ವಿಜಯ್‌ಕುಮಾರ್ ಕೂಡ ಪ್ರಶಸ್ತಿ ಗೆಲ್ಲುವ ಹಾಟ್‌ಫೇವರೇಟ್ ಆಗಿದ್ದಾರೆ. 39ರ ಹರೆಯದ ಡಾರ್ಕ್ ಹಾರ್ಸ್ ಎಂದೇ ಗುರುತಿಸಿಕೊಂಡಿರುವ ಮನ್ವಿಜಿತ್ ಸಿಂಗ್ ಸಾಂಧು ಕೂಡ ಸಾಕಷ್ಟು ಕ್ರೇಜ್ ಹುಟ್ಟಿಸಿದ್ದಾರೆ. ಅವರು 2004, 2008 ಮತ್ತು 2012ರ ಒಲಿಂಪಿಕ್ಸ್‌ನಲ್ಲಿ ಕೂಡ ಪದಕಗಳನ್ನು ಗೆದ್ದಿರುವುದನ್ನು ಇಲ್ಲಿ ಗಮನಿಸಬಹುದು. ಹೆನ್ನಾ ಸಿಂಧು ಕೂಡ ಪ್ರಶಸ್ತಿ ಗೆಲ್ಲುವತ್ತ ಚಿತ್ತ ಹರಿಸಿದ್ದಾರೆ. ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಹೆಚ್ಚು ಪದಕಗಳು ಒಲಿಯಲಿದೆ ಎಂದು ರಾಷ್ಟ್ರೀಯ ರೈಫಲ್ ಅಸೋಸಿಯೇಷನ್‌ನ ಅಧ್ಯಕ್ಷ ರನ್ನಿಂಧರ್ ಸಿಂಗ್ ಆಶಯ ವ್ಯಕ್ತಪಡಿಸಿದ್ದಾರೆ.

ಬಿಲ್ಲುಗಾರಿಕೆಯಲ್ಲೂ ಮಿಂಚು ಹರಿಸಲಿರುವ ಭಾರತ:
2012ರ ಒಲಿಂಪಿಕ್ಸ್‌ನಲ್ಲಿ ಮೊದಲ ಸುತ್ತಿನಲ್ಲೇ ಡೆನ್ಮಾರ್ಕ್ ಸ್ಪರ್ಧಾಳುಗಳ ಮುಂದೆ ಎಡವಿದ್ದ ಬಿಲ್ಲುಗಾರರು ಈ ಬಾರಿ ಪದಕ ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ. ವಿಶ್ವದ ನಂಬರ್ ಒನ್ ಬಿಲ್ಲುಗಾರ್ತಿ ದೀಪಿಕಾ ಕುಮಾರಿ ಮೇಲೆ ಎಲ್ಲರ ಗಮನ ಹರಿದಿದೆ. ಅಲ್ಲದೆ ಲಕ್ಷ್ಮಿ ರಾಣಿ ಮಂಜೈ, ಬೊಂಬಾಲ್ಯಾದೇವಿ, ಅಂತೂನು ದಾಸ್ ಕೂಡ ಪದಕ ಗೆಲ್ಲುವ ಚಾಣಾಕ್ಷತನವನ್ನು ಹೊಂದಿದ್ದಾರೆ.

ಗಮನ ಸೆಳೆದಿರುವ ಸೈನಾ ನೆಹ್ವಾಲ್:
ತನ್ನ ವೃತ್ತಿ ಜೀವನದ ಮೂರನೇ ಒಲಿಂಪಿಕ್ಸ್ ಆಡುತ್ತಿರುವ ಬ್ಯಾಡ್ಮಿಂಟನ್‌ನ ವಿಶ್ವದ ನಂಬರ್ 1 ಆಟಗಾರ್ತಿಯಾಗಿ ಗುರುತಿಸಿಕೊಂಡಿರುವ ಸೈನಾ ನೆಹ್ವಾಲ್ ಅವರು ಈ ಬಾರಿಯ ರಿಯೊ ಒಲಿಂಪಿಕ್ಸ್‌ನಲ್ಲೂ ಪದಕ ಬೇಟೆಗೆ ಮುಂದಿದ್ದಾರೆ. 2012ರಲ್ಲಿ ಲಂಡನ್‌ನಲ್ಲಿ ನಡೆದ ಒಲಿಂಪಿಕ್ಸ್ ನ ಮಹಿಳಾ ಸಿಂಗಲ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಸೈನಾ, 2016ರಲ್ಲಿ ನಡೆದ ಏಷ್ಯಾನ್ ಚಾಂಪಿಯನ್ಸ್ ಶಿಫ್ ಮಹಿಳಾ ಸಿಂಗಲ್ಸ್‌ನಲ್ಲಿ ಕಂಚು, ಉಮರ್ ಕಪ್‌ನಲ್ಲಿ ಕಂಚು ಗೆದ್ದಿದ್ದು ಈಗಿನ ರಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವತ್ತ ದೃಷ್ಟಿ ಹರಿಸಿದ್ದಾರೆ.ಸೈನಾ ನೆಹ್ವಾಲ್ ಅಲ್ಲದೆ ಈ ವಿಭಾಗದಲ್ಲಿ ವಿ.ಪಿ.ಸಿಂಧು, ಕಿದಂಬಿ ಶ್ರೀಕಾಂತ್ , ಜ್ವಾಲಾಗುಟ್ಟಾ, ಅಶ್ವಿನಿ ಪೊನ್ನಪ್ಪ ಕೂಡ ಹಾಟ್‌ಫೇವರೇಟ್‌ರೆನಿಸಿಕೊಂಡಿದ್ದಾರೆ.

ಪದಕ ಗೆಲ್ಲುವರೇ ನರಸಿಂಗ್..?
ರಿಯೊ ಒಲಿಂಪಿಕ್ಸ್‌ನ ಕುಸ್ತಿ ವಿಭಾಗಕ್ಕೆ ಅರ್ಹತೆ ಪಡೆದಿರುವ ನರಸಿಂಗ್ ಅವರು ಆರಂಭದಿಂದಲೂ ಪೈಪೋಟಿ ಎದುರಿಸುತ್ತಲೇ ಬಂದಿದ್ದಾರೆ. ಆಯ್ಕೆ ವಿಭಾಗದಲ್ಲೇ ಸುಶೀಲ್‌ಕುಮಾರ್‌ರೊಂದಿಗೆ ಸಮರ ನಡೆಸಿ ಜಯಿಸಿದ್ದ ನಂತರ ಡೋಪಿಂಗ್ ವಿವಾದದಿಂದಲೂ ಕ್ಲೀನ್ ಚಿಟ್ ಪಡೆದಿದ್ದು ಈಗ ಪದಕ ಗೆಲ್ಲುವತ್ತ ಗಮನ ಹರಿಸಿದ್ದಾರೆ. ಈ ವಿಭಾಗದಲ್ಲಿ ಯೋಗೇಶ್ವರ್‌ದತ್, ವಿನೇಶ್ ಪೋಗಾಟ್, ಮಹಿಳಾ ವಿಭಾಗದಲ್ಲಿ ಬಬಿತಾ ಕುಮಾರಿ , ಸಾಕ್ಷಿ ಮಿಲ್ಕಾ ಪದಕ ಸೂರೆಗೊಳ್ಳುವ ತವಕದಲ್ಲಿದ್ದಾರೆ. ಇವರೇ ಅಲ್ಲದೆ ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಟೆನ್ನಿಸ್, ಬಾಕ್ಸಿಂಗ್, ಹಾಕಿ ವಿಭಾಗದಿಂದಲೂ ಪ್ರಶಸ್ತಿಗಳು ಹರಿದು ಬರುವ ಸಾಧ್ಯತೆಗಳು ನಿಚ್ಚಳವಾಗಿದೆ.

ಸನಿಯಾ ಮಿರ್ಜಾ (ಟೆನ್ನಿಸ್), ಲಿಯಾಂಡರ್ ಪೇಸ್ (ಟೆನ್ನಿಸ್), ರೋಹನ್ ಬೋಪಣ್ಣ (ಟೆನ್ನಿಸ್), ಪ್ರಾರ್ಥಾನಾ ತೊಂಬಾರೆ (ಟೆನ್ನಿಸ್), ಮನ್ನಿಕಾ ಬಾತ್ರಾ (ಟೇಬಲ್ ಟೆನ್ನಿಸ್), ಶರತ್ ಕಮಲ್ (ಟೇಬಲ್ ಟೆನ್ನಿಸ್), ಮೌಮಾ ದಾಸ್ (ಟೇಬಲ್ ಟೆನ್ನಿಸ್), ಸರ್ದಾರ್ ಸಿಂಗ್ (ಹಾಕಿ), ಶಿವಾ ಧಾಪ್ಸೆ (ಬಾಕ್ಸಿಂಗ್), ವಿಕಾಸ್ ಕಿಸನ್ ಯಾದವ್ (ಬಾಕ್ಸಿಂಗ್), ಸತೀಶ್ ಶಿವಲಿಂಗಂ (ವೇಟ್‌ಲಿಫ್ಟಿಂಗ್),ಇಂದ್ರಜಿತ್ ಸಿಂಗ್ ( ಗುಂಡು ಎಸೆತ), ವಿಕಾಸ್ ಗೌಡ (ಗುಂಡು ಎಸೆತ), ಗುರುಮೀತ್‌ಸಿಂಗ್, ಅಲ್ಲದೆ ಅಥ್ಲಿಟ್‌ಗಳಾದ ದುತ್ತೇ ಚಾಂದ್ , ಕವಿತಾ ರೌತ್, ಲಲಿತಾ ಬಾಬ್ರಲ್,ಟಿನು ಲುಕ್ಕಾ , ಮನ್ನಿಶ್ ಸಿಂಗ್ ಅನ್ರಿಬಾನ್ ಲಹಿರಿ (ಗಲ್), ಸಂಜನಾ ಪ್ರಕಾಶ್ (ಸ್ವಿಮ್ಮಿಂಗ್) ಕೂಡ ಪದಕ ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ.

Comments are closed.