ಮುಂಬೈ

24 ಗಂಟೆಯೊಳಗೆ ಅಬ್ದುಲ್ ಬಸಿತ್’ನನ್ನು ಇಸ್ಲಾಮಾಬಾದ್’ಗೆ ಕಳುಹಿಸಿ: ಶಿವಸೇನೆ

Pinterest LinkedIn Tumblr

Sanjay-Rautಮುಂಬೈ: ಕಾಶ್ಮೀರ ಕುರಿತಂತೆ ಪ್ರಚೋದನಾಕಾರಿಯಾಗಿ ಹೇಳಿಕೆ ನೀಡುತ್ತಿರುವ ಭಾರತದಲ್ಲಿನ ಪಾಕಿಸ್ತಾನದ ಹೈಕಮಿಷನರ್‌ ಅಬ್ದುಲ್ ಬಸಿತ್ ನನ್ನು 24 ಗಂಟೆಯೊಳಗಾಗಿ ಇಸ್ಲಾಮಾಬಾದ್’ಗೆ ಕಳುಹಿಸಿ ಎಂದು ಶಿವಸೇನೆ ಭಾನುವಾರ ಹೇಳಿದೆ.

ಈ ಕುರಿತಂತೆ ಮಾತನಾಡಿರುವ ಶಿವಸೇನೆ ನಾಯಕ ಸಂಜಯ್ ರಾವತ್ ಅವರು, ನವದೆಹಲಿ ಹಾಗೂ ಮುಂಬೈ ನಲ್ಲಿರುವ ಪಾಕಿಸ್ತಾನ ಹೈ ಕಮಿಷನರ್ ಕಚೇರಿಯನ್ನು ಮುಚ್ಚಬೇಕಿದೆ. ದೆಹಲಿಯಲ್ಲಿದ್ದುಕೊಂಡು ಭಾರತದ ವಿರುದ್ಧವೇ ಅಬ್ದುಲ್ ಬಸಿತ್ ಪ್ರಚೋದನಾಕಾರಿ ಹೇಳಿಕೆಯನ್ನು ನೀಡುತ್ತಿದ್ದಾರೆ. ಇಂತಹ ವ್ಯಕ್ತಿಯನ್ನು 24 ಗಂಟೆಯೊಳಗಾಗಿ ಇಸ್ಲಾಮಾಬಾದ್ ಗೆ ಕಳುಹಿಸಬೇಕು ಎಂದು ಹೇಳಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆಗೆ ಒಂದು ದಿನ ಬಾಕಿ ಇರುವಾಗಲೇ ಅಬ್ದುಲ್ ಬಸಿತ್ ಅವರು ಈ ರೀತಿಯ ಪ್ರಚೋದನಾಕಾರಿ ಹೇಳಿಕೆಯನ್ನು ನೀಡಿದ್ದಾರೆ. ಬಸಿತ್ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ನನಗೆ ನಂಬಿಕೆಯಿದೆ.

ಪಾಕಿಸ್ತಾನ ಯಾವ ಕಾರಣಕ್ಕೆ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿದೆ ಎಂಬುದು ನನಗೆ ತಿಳಿಯುತ್ತಿಲ್ಲ. ದೇಶದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಆದರೆ, ಪಾಕಿಸ್ತಾನವೊಂದು ದೇಶವೇ ಅಲ್ಲ. ಅದೊಂದು ಭಯೋತ್ಪಾದನಾ ಚಟುವಟಿಕೆ ಕೇಂದ್ರವಾಗಿದೆ ಎಂದು ಹೇಳಿದ್ದಾರೆ.

Comments are closed.