ನಾಸಿಕ್: ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ 15 ವರ್ಷದ ಬಾಲಕನನ್ನು ಭಾನುವಾರ ನಾಸಿಕ್ ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಸಂಪೂರ್ಣ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು.
ತ್ರಯಂಬಕೇಶ್ವರ ತಾಲ್ಲೂಕಿನ ತಾಳೆಗಾಂ ಗ್ರಾಮದಲ್ಲಿ ಈ ಹೇಯ ಘಟನೆ ನಡೆದಿದ್ದು ಆರೋಪಿ ಬಾಲಕ ಐದು ವರ್ಷದ ಬಾಲೆಯನ್ನು ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು ಅತ್ಯಾಚಾರವೆಸಗಿದ್ದಾನೆ ಎಂದು ತ್ರಿಯಂಬಕೇಶ್ವರ ಪೊಲೀಸ್ ಠಾಣಾಧಿಕಾರಿ ಮುಕುಂದ ದೇಶಮುಖ್ ತಿಳಿಸಿದ್ದಾರೆ. ಆತನ ಬಂಧನವಾಗಿರುವುದನ್ನು ಸ್ವತಃ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸ್ಪಷ್ಟಪಡಿಸಿದ್ದಾರೆ.
ಈ ಕೃತ್ಯದ ಸುದ್ದಿ ಹರಡುತ್ತಿದ್ದಂತೆ ತಾಳೆಗಾಂನಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಆರೋಪಿಯನ್ನು ನಮ್ಮ ಕೈಗೊಪ್ಪಿಸಿ ಎಂದು ಜನರು ಆಗ್ರಹಿಸುತ್ತಿದ್ದಾರೆ. ಜತೆಗೆ ಪೊಲೀಸ್ ವಾಹನ ಮತ್ತು ಸಾರ್ವಜನಿಕ ಸಾರಿಗೆಯ ಮೇಲೆ ದಾಳಿ ಮಾಡಿದ್ದಾರೆ. ಶಾಂತಿಯನ್ನು ಕಾಪಾಡುವಂತೆ ನಾಸಿಕ್ ಪೊಲೀಸ್ ಆಯುಕ್ತ ರವೀಂದ್ರ ಸಿಂಘಾಲ್ ಮನವಿ ಮಾಡಿದ್ದಾರೆ.
Comments are closed.