ಮುಂಬೈ: ಪೈಲೆಟ್ ಸೇರಿದಂತೆ ನಾಲ್ಕು ಮಂದಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಗೊರೆಗಾಂವ್‌ನ ಆರೆಯ್ ಕಾಲೋನಿಯಲ್ಲಿ ಪತನಗೊಂಡಿದೆ.
ಮುಂಬೈನ ಅರಣ್ಯ ಪ್ರದೇಶಕ್ಕೆ ಸಮೀಪದಲ್ಲಿ ‘ರಾಬಿನ್‌ಸನ್ ಆರ್44’ ಹೆಲಿಕಾಪ್ಟರ್ ಭಾನುವಾರ ಬೆಳಿಗ್ಗೆ ಪತನಗೊಂಡಿದ್ದು, ಸ್ಥಳೀಯರು ಗಾಯಾಳುಗಳನ್ನು ಸೆವೆನ್ ಹಿಲ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಹೆಲಿಕಾಪ್ಟರ್‌ನಲ್ಲಿ ಪೈಲೆಟ್, ಇಬ್ಬರು ಮಹಿಳಾ ಪ್ರಯಾಣಿಕರು ಸೇರಿದಂತೆ 4 ಜನ ಪ್ರಯಾಣಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
‘ರಾಬಿನ್‌ಸನ್ ಆರ್44’ 1992ರಲ್ಲಿ ನಿರ್ಮಿಸಲಾದ ಹೆಲಿಕಾಪ್ಟರ್ ಆಗಿದೆ. ಪ್ರಸ್ತುತ ಜಾಯ್ ರೈಡ್‌ಗಾಗಿ ಬಳಸಲಾಗುತ್ತಿತ್ತು.
Comments are closed.