ಮುಂಬಯಿ: ತನ್ನ 25 ಕೋಟಿ ಗ್ರಾಹಕರಿಗೆ ಅನುಕೂಲವಾಗಲಿರುವ ನಡೆಯೊಂದರಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್, ಸರಾಸರಿ ಮಾಸಿಕ ಠೇವಣಿ ಕಾಪಾಡದ ಮೇಲಿನ ದಂಡದಲ್ಲಿ ಶೇ 70 ರಷ್ಟು ಕಡಿತಗೊಳಿಸಿದೆ.
ಪರಿಷ್ಕರಿಸಿದ ಶುಲ್ಕಗಳು ಏಪ್ರಿಲ್ 1, 2018ರಿಂದ ಜಾರಿಗೆ ಬರಲಿವೆ.
ಕನಿಷ್ಠ ಠೇವಣಿ ಕಾಪಾಡಿಕೊಳ್ಳದಿದ್ದರೆ ಬ್ಯಾಂಕ್‌ನ ಮೆಟ್ರೋ ಶಾಖೆಗಳಲ್ಲಿ ಈ ಹಿಂದೆ ಇದ್ದ 50ರು ನೊಂದಿಗೆ ಜಿಎಸ್‌ಟಿ ಶುಲ್ಕ ಪರಿಷ್ಕರಿಸಿದ್ದು ಜಿಎಸ್‌ಟಿಯೊಂದಿಗೆ 15ರುಗಳಿಗೆ ಇಳಿಸಲಾಗಿದೆ. ಪಟ್ಟಣ ಹಾಗು ಗ್ರಾಮಾಂತರ ಶಾಖೆಗಳಲ್ಲಿ ಈ ಮುನ್ನ ಇದ್ದ 40ರುನಿಂದ ಜಿಎಸ್‌ಟಿಯೊಂದಿಗೆ ಕ್ರಮವಾಗಿ 12ರು ಹಾಗು 10ರುಗೆ ಇಳಿಸಲಾಗಿದೆ.
ತನ್ನ ಲಾಭಗಳಿಗಿಂತ ಹೆಚ್ಚಾಗಿ ಕನಿಷ್ಠ ಠೇವಣಿ ಕಾಪಾಡದ ಕಾರಣಕ್ಕೆ ವಿಧಿಸಿದ ದಂಡದ ಮೂಲಕವೇ ಹೆಚ್ಚಾಗಿ ಸಂಪಾದಿಸಿದೆ ಎಂದು ಬ್ಯಾಂಕ್ ಮೇಲೆ ಆಪಾದನೆ ಕೇಳಿ ಬಂದ ಕಾರಣ ಬ್ಯಂಕ್ ಪದಾಧಿಕಾರಿಗಳು ಈ ನಿರ್ಧಾರಕ್ಕೆ ಬಂದಿದ್ದಾರೆ.
“ನಮ್ಮ ಗ್ರಾಹಕರ ಅಭಿಪ್ರಾಯಗಳನ್ನು ಸಂಗ್ರಹಿಸಿದ ಬಳಿಕ ಈ ಶುಲ್ಕಗಳಲ್ಲಿ ಇಳಿಕೆ ಮಾಡಿದ್ದೇವೆ. ಅಲ್ಲದೇ ಸಾಮಾನ್ಯ ಉಳಿತಾಯ ಖಾತೆಗಳ ಬದಲು ಮೂಲ ಉಳಿತಾಯ ಖಾತೆಗಳಿಗೆ ವರ್ಗಾವಣೆ ಮಾಡಿಕೊಳ್ಳುವ ಮೂಲಕ ಸಂಭವನೀಯ ದಂಡ ತಪ್ಪಿಸಿಕೊಳ್ಳಲು ನಮ್ಮ ಗ್ರಾಹಕರಿಗೆ ಸೂಚಿಸಿದ್ದೇವೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎಸ್‌ಬಿಐ ಬಳಿ 41 ಕೋಟಿ ಖಾತೆಗಳಿದ್ದು ಅದರಲ್ಲಿ 16 ಕೊಟಿ ಖಾತೆಗಳು ಜನ್‌ಧನ್ ಯೋಜನೆಯಡಿ ಬಂದರೆ ಮಿಕ್ಕವು ಮೂಲ ಉಳಿತಾಯ ಖಾತೆಯಡಿಗೆ ಬರುತ್ತವೆ. ಈ ಎರಡು ಖಾತೆಗಳಿಗೆ ಕನಿಷ್ಠ ಠೇವಣಿ ಕಡ್ಡಾಯವಲ್ಲ. ಇದಲ್ಲದೇ ಪಿಂಚಣಿದಾರರು, ಅಪ್ರಾಪ್ತರು ಹಾಗು ಸಾಮಾಜಿಕ ಭದ್ರತೆಯಡಿ ಬರುವವರ ಖಾತೆಗಳನ್ನು ಈ ಶುಲ್ಕದಿಂದ ಹೊರತು ಪಡಿಸಲಾಗಿತ್ತು. ಇಷ್ಟೇ ಅಲ್ಲದೇ 21ನೇ ವಯಸ್ಸಿನ ವಯೋಮಿತಿಯಡಿ ಬರುವ ವಿದ್ಯಾರ್ಥಿಗಳನ್ನೂ ಹೊರತುಪಡಿಸಲಾಗಿದೆ.
Comments are closed.