ಮುಂಬೈ

ಮನೆಪಾಠ ಹೇಳಿಕೊಡುವ ನೆಪವೊಡ್ಡಿ 13 ವರ್ಷದ ಬಾಲಕಿಯ ಮೇಲೆ ಪದೇ ಪದೇ ಅತ್ಯಾಚಾರ ನಡೆಸಿದ 75 ವರ್ಷದ ಶಿಕ್ಷಕನಿಗೆ ಜೀವಾವಧಿ ಶಿಕ್ಷೆ

Pinterest LinkedIn Tumblr


ಮುಂಬಯಿ: ಮನೆಪಾಠ ಹೇಳಿಕೊಡುವ ನೆಪವೊಡ್ಡಿ 13 ವರ್ಷದ ಬಾಲಕಿಯ ಮೇಲೆ ಪದೇ ಪದೇ ಅತ್ಯಾಚಾರ ನಡೆಸಿ, ಆಕ್ಷೇಪಾರ್ಹ ವಿಡಿಯೋ ಚಿತ್ರೀಕರಿಸಿದ 75 ವರ್ಷದ ಶಿಕ್ಷಕನಿಗೆ ಪೋಸ್ಕೋ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿದೆ. 2013ರಲ್ಲಿ ಈ ಪ್ರಕರಣ ಬೆಳಕಿಗೆ ಬಂದಿತ್ತು.

ಡಿಸೆಂಬರ್ 2012ರ ಒಂದು ದಿನ ಬಾಲಕಿ ತನ್ನ ಸ್ನೇಹಿತೆಯರ ಜತೆ ಪರೀಕ್ಷೆಹೋಗುತ್ತಿದ್ದಾಗ ಅವರನ್ನೆಲ್ಲ ಕರೆದ ಶಿಕ್ಷಕ ಮನೆಪಾಠ ಹೇಳಿಕೊಡುವುದಾಗಿ ಹೇಳಿದ್ದಾನೆ. ಜತೆಗೆ ಪರೀಕ್ಷೆಗೆ ಸಹಾಯಕವಾಗುವಂಥ ನೋಟ್ಸ್ ನೀಡುವುದಾಗಿ ಪುಸಲಾಯಿಸಿದ್ದಾನೆ.

ಮಾತನಾಡುತ್ತಿದ್ದ ಆತ ಇದ್ದಕ್ಕಿದ್ದಂತೆ ಕದ ಮುಚ್ಚಲು ಪ್ರಯತ್ನಿಸಿದಾಗ ಒಬ್ಬಳನ್ನು ಬಿಟ್ಟು ಎಲ್ಲ ಹುಡುಗಿಯರು ಓಡಿ ಹೋಗಿದ್ದಾರೆ. ಆದರೆ ನೋಟ್ಸ್ ಆಕಾಂಕ್ಷಿ ಬಾಲಕಿ ಮಾತ್ರ ಅಲ್ಲೇ ಉಳಿದುಕೊಂಡಿದ್ದು, ಶಿಕ್ಷಕ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಬಳಿಕ ಮತ್ತೆರಡು ಬಾರಿ ಕೂಡ ಆಕೆಯ ಮೇಲಾತ ಅತ್ಯಾಚಾರವೆಸಗಿದ್ದು ಯಾರಿಗಾದರೂ ಹೇಳಿದರೆ ನಿಮ್ಮ ತಂದೆ-ತಾಯಿ ಕೊಲೆಗೈಯ್ಯುವುದಾಗಿ ಬೆದರಿಸಿದ್ದಾನೆ.

ಆಕೆಯ ಆಕ್ಷೇಪಾರ್ಹ ವಿಡಿಯೋ ವೈರಲ್ ಆದಾಗ ಪ್ರಕರಣ ಪೋಷಕರ ಅರಿವಿಗೆ ಬಂದಿದ್ದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಂತ್ರಸ್ತ ಬಾಲಕಿಯ ನೆರೆಮನೆಯವರೊಬ್ಬರು ಬಾಲಕಿಯನ್ನು ಲೈಂಗಿಕವಾಗಿ ಬಳಸಿಕೊಳ್ಳುವ ವಿಡಿಯೋವನ್ನು ಕೆಲವು ಹುಡುಗರ ಮೊಬೈಲ್‌ನಲ್ಲಿ ನೋಡಿ ಆಕೆಯ ಪೋಷಕರಿಗೆ ತಿಳಿಸಿದ್ದ.

4 ವರ್ಷಗಳ ಕಾಲ ನಡೆದ ವಿಚಾರಣೆಯಲ್ಲಿ ಆರೋಪ ಸಾಬೀತಾಗಿದ್ದು 75 ವರ್ಷದ ದುರುಳನಿಗೆ ಜೀವಾವಧಿ ಶಿಕ್ಷೆಯಾಗಿದೆ.

Comments are closed.