ಮುಂಬೈ

ಅನ್ಯಧರ್ಮೀಯ ನವದಂಪತಿ ವಿಷ ಸೇವಿಸಿ ಆತ್ಮಹತ್ಯೆ

Pinterest LinkedIn Tumblr


ಮುಂಬೈ: ಕಾರಿನಲ್ಲಿ ಯುವ ದಂಪತಿ ಮೃತಪಟ್ಟಿರುವ ಘಟನೆ ಬುಧವಾರ ಮುಂಬೈನಲ್ಲಿ ಪತ್ತೆಯಾಗಿದೆ.

ಇಂದು ಮುಂಜಾನೆ ಮುಲುಂದ್‌ ಉಪನಗರದ ನ್ಯಾಯಾಲಯದ ಆವರಣದಲ್ಲಿ ನಿಂತಿದ್ದ ಕಾರಿನೊಳಗೆ ಅಫ್ರೋಜ್‌ ಖಾನ್‌(26) ಮತ್ತು ಮನಿಶಾ ನೇಗಿಲ್‌(21) ದಂಪತಿ ಮೃತಪಟ್ಟಿದ್ದಾರೆ.
ದಂಪತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳದಲ್ಲಿ ಡೆತ್‌ ನೋಟ್‌ ಪತ್ತೆಯಾಗಿಲ್ಲದಿರುವುದರಿಂದ ಇಬ್ಬರು ಅನ್ಯ ಧರ್ಮೀಯರಾಗಿರುವುದರಿಂದ ಧರ್ಮದ ವಿಚಾರವಾಗಿ ಎರಡು ಕುಟುಂಬದಲ್ಲಿ ಮದುವೆಗೆ ಎದುರಾಗಿರುವ ಪ್ರತಿರೋಧದಿಂದಾಗಿ ಅಸಮಾಧಾನಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಇನ್ನು ಕೋರ್ಟ್‌ ಆವರಣದಲ್ಲಿ ನಿಂತಿದ್ದ ಕಾರ್‌ ಇಂಜಿನ್‌ ಮತ್ತು ಲೈಟ್‌ ಹೊತ್ತಿಕೊಂಡಿದ್ದನ್ನು ಗಮನಿಸಿದ ಸ್ಥಳೀಯರು ಕೂಡಲೇ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಕಾರಿನ ಗಾಜನ್ನು ಹೊಡೆದು ನೋಡಿದಾಗ ಇಬ್ಬರು ಪ್ರಜ್ಞೆ ತಪ್ಪಿದ್ದರು. ಕೂಡಲೇ ಆಸ್ಪತ್ರಗೆ ದಾಖಲಿಸಲಾಯಿತಾದರೂ ಆ ವೇಳೆಗಾಗಲೇ ಮೃತಪಟ್ಟಿದ್ದರು.

ಪ್ರಾಥಮಿಕ ಮಾಹಿತಿಯ ಪ್ರಕಾರ ಖಾನ್‌ ಮುಲುಂದ್‌ ನಿವಾಸಿಯಾಗಿದ್ದು, ನೇಗಿ ಮುಂಬೈನಲ್ಲಿ ವಾಸವಾಗಿದ್ದರು. ಕಳೆದ ನಾಲ್ಕು ವರ್ಷಗಳಿಂದ ಪರಿಚಿತರಾಗಿದ್ದ ಇಬ್ಬರು ಮದುವೆಯಾಗಲು ತೀರ್ಮಾನಿಸಿದ್ದರು. ಆಗ ಎರಡು ಕುಟುಂಬದವರು ವಿರೋಧ ವ್ಯಕ್ತಪಡಿಸಿದ್ದರು ಎಂದು ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

ಇದರಿಂದಾಗಿ ಅಸಮಾಧಾನ ಗೊಂಡ ದಂಪತಿ ಕಾರಿನಲ್ಲಿಯೇ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

Comments are closed.