ಮುಂಬೈ

ಸದ್ಯ ಭಾರತಕ್ಕೆ ಬರುವುದಿಲ್ಲ: ಝಾಕೀರ್‌ ನಾಯ್ಕ್

Pinterest LinkedIn Tumblr


ಮುಂಬಯಿ: ತನ್ನ ವಿರುದ್ಧ ನ್ಯಾಯಸಮ್ಮತವಲ್ಲದ ವಿಚಾರಣೆ ನಡೆಯುವುದಿಲ್ಲ ಎಂದು ಮನವರಿಕೆ ಆಗುವವರೆಗೂ ಭಾರತಕ್ಕೆ ಹಿಂತಿರುಗುವುದಿಲ್ಲ ಎಂದು ವಿವಾದಾತ್ಮಕ ಇಸ್ಲಾಂ ಪ್ರಚಾರಕ ಝಾಕೀರ್‌ ನಾಯ್ಕ್‌ ಹೇಳಿದ್ದಾನೆ.

ತನ್ನನ್ನು ಮಲೇಷ್ಯಾದಿಂದ ಭಾರತಕ್ಕೆ ಗಡಿಪಾರು ಮಾಡಲಾಗುತ್ತದೆ ಎನ್ನುವ ವರದಿ ಕುರಿತು ಪ್ರತಿಕ್ರಿಯಿಸಿರುವ ನಾಯ್ಕ್‌,”ನಾನು ಭಾರತಕ್ಕೆ ಬರುವ ಸುದ್ದಿ ಆಧಾರರಹಿತ ಮತ್ತು ಸುಳ್ಳು. ಸದ್ಯಕ್ಕೆ ಭಾರತಕ್ಕೆ ಹಿಂದಿರುಗುವ ಯಾವುದೇ ಯೋಜನೆಯಿಲ್ಲ. ನಾನು ಖಂಡಿತವಾಗಿ ನನ್ನ ಮಾತೃಭೂಮಿ ಭಾರತಕ್ಕೆ ಮರುತ್ತೇನೆ. ಆದರೆ, ಈಗಲ್ಲ…ಅಲ್ಲಿನ ಸರಕಾರ ನ್ಯಾಯಪರವಾಗಿದೆ ಎಂಬ ಭಾವನೆ ನನಗೆ ಮೂಡಿದ ನಂತರವಷ್ಟೆ,” ಎಂದು ತಿಳಿಸಿದ್ದಾನೆ. ಸಾರ್ವಜನಿಕ ಸಂಪರ್ಕ ಅಧಿಕಾರಿ ಮೂಲಕ ಈ ಹೇಳಿಕೆ ಬಿಡುಗಡೆ ಮಾಡಿದ್ದಾನೆ.

ತನ್ಮಧ್ಯೆ, ಝಾಕೀರ್‌ ಗಡಿಪಾರು ಕುರಿತು ಮಲೇಷ್ಯಾ ಸರಕಾರದಿಂದ ಯಾವುದೇ ಮಾಹಿತಿ ಬಂದಿಲ್ಲ. ಈ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಎಂದು ರಾಷ್ಟೀಯ ತನಿಖಾ ದಳ(ಎನ್‌ಐಎ) ಪ್ರಧಾನ ನಿರ್ದೇಶಕ ವೈ.ಸಿ. ಮೋದಿ ಸ್ಪಷ್ಟಪಡಿಸಿದ್ದಾರೆ.

ಕೋಮುವಾದ, ಭಯೋತ್ಪಾದನೆ ಪ್ರಚೋದನೆ ನೀಡುವ ಭಾಷಣ ಹಾಗೂ ಉಗ್ರರಿಗೆ ಹಣಕಾಸು ನೆರವು ನೀಡಿದ ಆರೋಪದ ಮೇಲೆ ನವೆಂಬರ್‌ 18, 2016ರಂದು ಎನ್‌ಐಎ, ನಾಯ್ಕ್‌ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿದೆ. ಜತೆಗೆ ಆತನ ಇಸ್ಲಾಮಿಕ್‌ ರಿಸರ್ಚ್‌ ಫೌಂಡೇಷನ್‌ ಅನ್ನು ಕಾನೂನುಬಾಹಿರ ಚಟುವಟಿಕೆ ಕಾಯ್ದೆ ಅಡಿ ಕೇಂದ್ರ ಗೃಹ ಸಚಿವಾಲಯ ನಿಷೇಧ ಹೇರಿದೆ. ಢಾಕಾ ದಾಳಿ ನಡೆಸಿದ ಐಸಿಸ್‌ ಉಗ್ರರಿಗೆ ಪ್ರೇರಣೆ ನೀಡಿದ ಆರೋಪ ಸಹ ನಾಯ್ಕ್‌ ಮೇಲೆ ಇದ್ದು, 2016ರಿಂದ ಮಲೇಷ್ಯಾದ ಪುತ್ರಜಯದಲ್ಲಿ ನೆಲೆಸಿದ್ದಾನೆ.

Comments are closed.