ಮನೋರಂಜನೆ

ನನ್ನಣ್ಣ ಸಂಜಯ್ ದತ್ತ್ ದೊಡ್ಡ ರೋಲ್ ಮಾಡೆಲ್: ಆರೆಸ್ಸೆಸ್ ಟೀಕೆಗೆ ಪ್ರಿಯಾ ದತ್ ಉತ್ತರ

Pinterest LinkedIn Tumblr

ಮುಂಬೈ: ಬಾಲಿವುಡ್ ಹಿರಿಯ ನಟ ಸಂಜಯ್ ದತ್ ಜೀವನಾಧಾರಿತ ಸಂಜು ಸಿನಿಮಾ ಭೂಗತ ಲೋಕ ಮತ್ತು ಅವಗುಣಗಳ ವರ್ಣನೆಯಾಗಿದೆ ಎಂದು ಆರೆಸ್ಸೆಸ್​ನ ವಾರಪತ್ರಿಕೆ ಪಾಂಚಜನ್ಯ ಟೀಕೆಗೆ ಸಂಜಯ್ ದತ್ ತಂಗಿ ಪ್ರಿಯಾ ದತ್ ಕಿಡಿಕಾರಿದ್ದು, ನನ್ನಣ್ಣ ದೊಡ್ಡ ರೋಲ್ ಮಾಡೆಲ್ ಎಂದಿದ್ಧಾರೆ.

ಪ್ರತಿಯೊಬ್ಬರೂ ತಮ್ಮದೇ ಆದ ಅಭಿಪ್ರಾಯ ಹೊಂದಿರುತ್ತಾರೆ. ಆರೆಸ್ಸೆಸ್ ಯಾವಾಗಲೂ ವಿಶ್ಲೇಷನಾತ್ಮಕವಾಗಿರುತ್ತದೆ. ಸಂಜಯ್ ದತ್ ದೊಡ್ಡ ರೋಲ್ ಮಾಡೆಲ್. ಅಲ್ಲಿ ಯಾಕೆ ವಿವಾದ ಸೃಷ್ಟಿಯಾಗಿದೆ ಎಂಬುದನ್ನ ಅರ್ಥ ಮಾಡಿಕೊಳ್ಳಲು ನನಗೆ ಈಗ;ಊ ಸಾಧ್ಯವಾಗುತ್ತಿಲ್ಲ ಎಂದು ನ್ಯೂಸ್ 18ಗೆ ಪ್ರಿಯಾ ದತ್ ಹೇಳಿದ್ದಾರೆ.

ಹಾಲಿವುಡ್​ನಲ್ಲಿ ಗಣಿತ ಶಾಸ್ತ್ರಜ್ಞ ರಾಮಾನುಜನ್ ಕಥೆಯನ್ನ ಸಿನಿಮಾ ಮಾಡಿದ್ದಾರೆ. ಆದರೆ, ಬಾಲಿವುಡ್​ನಲ್ಲಿ 1993ರ ಮುಂಬೈ ಸ್ಪೋಟ ಪ್ರಕರಣದ ಆರೋಪಿಯ ಕಥೆಯನ್ನ ಸಿನಿಮಾ ಮಾಡಲು ಆಯ್ದುಕೊಂಡಿದ್ದಾರೆ. ಬಾಲಿವುಡ್ ಭೂಗತ ಲೋಕವನ್ನ ವೈಭವೀಕರಣಗೊಳಿಸುತ್ತಿದೆ ಎಂದ ಪಂಚಜನ್ಯದ ಸಂಪಾದಕೀಯದಲ್ಲಿ ಟೀಕಿಸಲಾಗಿತ್ತು.

ಸಂಜಯ್ ದತ್ ಹಲವು ಅವಗುಣಗಳನ್ನ ಹೊಂದಿರುವ ಮನುಷ್ಯ. 1993 ಬಾಂಬ್ ಸ್ಫೋಟ ಮತ್ತು ಕೋಮುಗಲಭೆಯಲ್ಲಿ ತೊಡಗಿಸಿಕೊಂಡಿದ್ದವನು. ಮನೆಯಲ್ಲಿ ಶಸ್ತ್ರಾಸ್ತ್ರ ಅಡಗಿಸಿಟ್ಟಿದ್ದ ಆತ ಅವುಗಳನ್ನ ಶೋಧಿಸಲು ಪೊಲಿಸರಿಗೆ ಅವಕಾಶ ಕೊಡಲಿಲ್ಲ. ಮೂರು ಬಾರಿ ಮದುವೆಯಾಗಿದ್ದು, ಹಲವು ವರ್ಷಗಳ ಕಾಲ ಮಗಳನ್ನೇ ಭೇಟಿಯಾಗಿರಲಿಲ್ಲ. ಸಿನಿಮಾ ಪ್ರಕಾರ, ಆತ 308 ಮಹಿಳೆಯರ ಜೊತೆ ಸಂಬಂಧ ಹೊಂದಿದ್ದು, ತಮದೆ ತಾಯಿ ಗೌರವವನ್ನ ಕಾಪಾಡಲಿಲ್ಲ. ಇದು ಸಂಜಯ್ ದತ್ ಎಂದು ಪಾಂಚಜನ್ಯ ಸಂಪಾದಕೀಯದಲ್ಲಿ ಟೀಕಿಸಲಾಗಿತ್ತು.

Comments are closed.